ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ರಾಜೇನಹಳ್ಳಿ ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಾಲಯ ಪುನರ್ ನಿರ್ಮಾಣಕ್ಕೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಕೆ.ರವಿ (ಡಾಲು ರವಿ) ಆರ್ಥಿಕ ಸಹಾಯ ನೀಡಿದರು.
ಪಟ್ಟಣದಲ್ಲಿರುವ ತಮ್ಮ ನಿವಾಸದ ರಾಜೇನಹಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಆರ್ಥಿಕ ಧನಸಹಾಯ ನೀಡಿ ಮಾತನಾಡಿರು. ಇಂತಹ ಪುಣ್ಯಕಾರ್ಯಕ್ಕೆ ನನ್ನ ಕೈಲಾದ ಪುಟ್ಟ ಸಹಾಯ ಮಾಡುತ್ತಿದ್ದೇನೆ. ಪ್ರತಿಯೊಬ್ಬರೂ ದೇವಾಲಯ ನಿರ್ಮಾಣ ಕಾರ್ಯಕ್ಕೆ ತಮ್ಮ ಶಕ್ತಾನುಸಾರ ದೇಣಿಗೆ ನೀಡಿ ದೇವಾಲಯ ನಿರ್ಮಾಣಕ್ಕೆ ಕೈಜೋಡಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು.
ಮನುಷ್ಯನಿಗೆ ಬೇಕಾದ ಶಾಂತಿ-ನೆಮ್ಮದಿಯನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ.ಕೇವಲ ಬಡವರಿಗೆ ದಾನ ಮಾಡುವ ಮೂಲಕ ಹಾಗೂ ದೇವಾಲಯದಲ್ಲಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಅಭಿಪ್ರಾಯಪಟ್ಟರು.
ಬಳಿಕ ಮಾತನಾಡಿದ ಗ್ರಾಮದ ಹಿರಿಯ ಮುಖಂಡ ಹಾಗೂ ಸಮಾಜ ಸೇವಕ ರೇವಣ್ಣ ತಾಲೂಕಿನ ಅದ್ಯಂತ ಸಮಾಜಮುಖಿ ಕಾರ್ಯ ತೊಡಗಿರುವ ಡಾಲು ರವಿ ರವರನ್ನ ಕಳೆದ ಒಂದು ವಾರದ ಹಿಂದೆ ಭೇಟಿ ಮಾಡಿ ಗ್ರಾಮದ ಶ್ರೀ ಕಾಲ ಭೈರವೇಶ್ವರ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿಗೆ ತಮ್ಮ ಸಹಾಯ ನೀಡಬೇಕೆಂದು ಮನವಿ ಸಲ್ಲಿಸಿದ್ದೋ.
ಮನವಿ ಸ್ಪಂದನೆಯಾಗಿ ಇಂದು ಅವರ ನಿವಾಸಕ್ಕೆ ಆಹ್ವಾನಿಸಿ ನಿರ್ಮಾಣ ಹಂತದಲ್ಲಿರುವ ದೇವಾಲಯಕ್ಕೆ ತಮ್ಮ ಕೈಲಾದ ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ನಮ್ಮ ಗ್ರಾಮದ ದೇವಾಲಯ ನಿರ್ಮಾಣಕ್ಕೆ ಸಹಕಾರಿಯಾಗಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿಕ್ಷಕ ಪದ್ಮೇಶ್, ಗ್ರಾಮದ ಹಿರಿಯ ಮುಖಂಡರಾದ ಚಿಕ್ಕಬೋರೇಗೌಡ, ಸ್ವಾಮಿಗೌಡ, ವೆಂಕಟರಮಣೆಗೌಡ, ಶಿವಲಿಂಗೆಗೌಡ, ಜಾಲೆಂದ್ರ, ರಾಕೇಶ್, ಸೇರಿದಂತೆ ಉಪಸ್ಥಿತರಿದ್ದರು.