ನೆಲಮಂಗಲ: ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡುವುದು ಪ್ರತಿಯೊಬ್ಬರ ದರ್ಮವಾಗಿದೆ ಎಂದು ಕರ್ನಾಟಕ ಜನ ಸೈನ್ಯ ಸಂಘಟನೆ ರಾಜ್ಯಾಧ್ಯಕ್ಷ ಬಿ.ನರಸಿಂಹಯ್ಯ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಜಕ್ಕಸಂದ್ರ ಗ್ರಾಮದ ನಿವಾಸಿ ರಮೇಶ್ ಎಂಬ ಕೂಲಿಕಾರ್ಮಿಕ ಇತ್ತೀಚಿನ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಹಿನ್ನಲೆ ಕಲ್ಪ ವೃಕ್ಷ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ಜನ ಸೈನ್ಯ ಸಂಘಟನೆ ಸಹಯೋಗದೊಂದಿಗೆ ಅರ್ಥಿಕ ಸಹಾಯ ನೀಡಿ ಮಾತನಾಡಿದರು.
ದುಡಿಮೆ ಸ್ವಲ್ಪ ಪ್ರಮಾಣ ಹಣವನ್ನು ಸಮಾಜ ಏಳಿಗೆ ಹಾಗೂ ನೊಂದದವರ ಸಂಕಷ್ಟ ಮೀಸಲಿಸಬೇಕು. ಕೂಲಿಕಾರ್ಮಿಕರ ಯೋಗ ಕ್ಷೇಮವನ್ನು ವಿಚಾರಣೆ ಮಾಡಿ ನೊಂದ ಕಾರ್ಮಿಕರ ಪರವಾಗಿ ರಾಜ್ಯಾದ್ಯಂತ ಸಂಘಟನೆ ನಿತ್ಯ ಶ್ರಮಿಸುತ್ತಿದೆ. ಕಟ್ಟಡ ಕೂಲಿ ಕಾರ್ಮಿಕ ರಮೇಶ್ ಎಂಬಾತರು ಶಿವಗಂಗೆ ಬಳಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ರಸ್ತೆ ಅಪಘಾತವಾಗಿ ತಮ್ಮ ಬಲಗಾಲು ಮುರಿದೆ. ಬಳಿಕ ಸ್ಥಳೀಯರು ಹಾಗೂ ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ.
ಬಳಿಕ ಮನೆಯಲ್ಲಿ ಯಾರು ದುಡಿಯುವ ವ್ಯಕ್ತಿಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆಂದು ಸ್ನೇಹಿತರ ಮನವಿ ಮಾಡಿದ್ದ ಹಿನ್ನಲೆ ಕಾರ್ಮಿಕ ಹಾಗೂ ಸಂಘಟನೆ ಸಹಕಾರದಿಂದ ಚಿಕಿತ್ಸೆ ವೆಚ್ಚಕ್ಕಾಗಿ ಸುಮಾರು 25ಸಾವಿರ ನಗದು ಹಣ ಹಾಗೂ ಕುಟುಂಬ ನಿರ್ವಹಣೆ ಗಾಗಿ ಹಣ್ಣು ತರಕಾರಿಯನ್ನು ನೀಡಲಾಗಿದೆ.
ರಾಜ್ಯಾದ್ಯಂತ ಯಾವುದೇ ಕೂಲಿಕಾರ್ಮಿಕರು ಸಂಕಷ್ಟದಲ್ಲಿ ಇದ್ದರೆ ಸಂಘಟನೆಯಿಂದ ಸಹಾಯ ಮಾಡಲಾಗುವುದು. ಈಗಾಗಲೇ ಸಾಕಷ್ಟು ಮಂದಿ ಸಂಘಟನೆಯಿಂದ ಸಹಾಯ ಮಾಡಿದ್ದು ನಿತ್ಯ ಕಾರ್ಮಿಕರ ಶ್ರೇಯೋಭಿವೃದ್ದಿಗೆ ಸಂಘಟನೆ ಶ್ರಮಿಸುತ್ತಿದೆ ಎಂದರು.
ಸಂದರ್ಭದಲ್ಲಿ ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಕೆ.ಪಲ್ಲವಿ, ಕಾರ್ಮಿಕರಾದ ಸಣ್ಣಮೂರ್ತಪ್ಪ, ಕೃಷ್ಣಮೂರ್ತಿ, ಸಂತೋಷ್ಕುಮಾರ್, ಮೋಹನ್, ಶಿವರುದ್ರಯ್ಯ, ಉಮೇಶ್,ಶರಣಬಸಪ್ಪ, ಲಕ್ಣ್ಮಣ್, ಹನುಮಂತರಾಜು, ಮೂರ್ತಿ, ವೆಂಕಟೇಶ್, ಸುರೇಶ್, ಸೋಮಶೇಖರ್, ಆನಂದ್, ಮಾರುತಿ, ಗಣೇಶಯ್ಯ, ಜ್ಯೋತಿಮಂಜುನಾಥ್, ಪಾಪಯ್ಯ ಮತ್ತಿತರರು ಉಪಸ್ಥಿತರಿದ್ದರು.