ಕನಕಪುರ: ನಗರದ ಎಂ.ಜಿ. ರಸ್ತೆಯಲ್ಲಿ ಗಾರ್ಮೆಂಟ್ಸ್ ಅಂಗಡಿ ಮಾಲೀಕ ಚಿಂದಿಬಟ್ಟೆಗಳ ಮೂಟೆಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿರುವುದನ್ನು ನೋಡಿದ ನಗರಸಭಾ ಆಯುಕ್ತ ಎಂ.ಎಸ್.ಮಹಾದೇವ ಅಂಗಡಿಗೆ ಬೀಗವನ್ನು ಹಾಕಿಸಿ ಅಂಗಡಿ ಮಾಲೀಕನಿಗೆ ಐದು ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ ಗಾರ್ಮೆಂಟ್ಸ್ ಮಾಲೀಕ ಚಿಂದಿ ಬಟ್ಟೆ ಗಳ ಮೂಟೆಗಳನ್ನು ನಗರಸಭೆಯ ಕಸ ವಿಲೇವಾರಿ ಮಾಡುವ ವಾಹನಗಳಿಗೆ ನೀಡಿದೆ ಮನಸೋ ಇಚ್ಛೆ ರಸ್ತೆ ಬದಿಯಲ್ಲಿ ಸುರಿಯುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಸುರಿದ ಕಸವನ್ನು ಆತನ ಅಂಗಡಿ ಮುಂದೆ ಸುರಿದು, ಅಂಗಡಿಗೆ ಬೀಗ ಹಾಕಿ 5000 ರೂಪಾಯಿ ದಂಡದ ಹಣ ವನ್ನು ಪಾವತಿಸಿಕೊಂಡು ಇನ್ನು ಮುಂದೆ ನಗರಸಭೆಯ ವಾಹನಗಳಿಗೇ ಕಸ ನೀಡದೆ ಸಾರ್ವಜನಿಕ ಸ್ಥಳದಲ್ಲಿ ಬೀಸಾಡಿದರೆ ರೂ.50,000 ರವರೆಗೆ ದಂಡ ವಿಧಿಸಿ ಪ್ರಕರಣ ದಾಖಲಿಸಲಾಗುವುದೆಂದು ಏಚ್ಚರಿಕೆ ನೀಡಿದರು.
ನಗರಸಭೆ ವ್ಯಾಪ್ತಿಯ ಸಾರ್ವಜನಿಕರು,ಅಂಗಡಿಗಳ ಮಾಲೀಕರು ಮತ್ತು ಉದ್ದಿಮೆದಾರರು ತ್ಯಾಜ್ಯವಸ್ತುವನ್ನು ನಗರಸಭೆಯ ಕಸ ಸಂಗ್ರಹಿಸುವ ವಾಹನಕ್ಕೆ ನೀಡಬೇಕು, ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೀಸಾಡಬಾರ ದೆಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ರಾಘಯ್ಯ ಹಾಗೂ ನಗರಸಭಾ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.