ಬೆಳಗಾವಿ: ಕನ್ನಡರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ ಮಾಡಿದ ಹಿನ್ನೆಲೆ, ಬೆಳಗಾವಿ ಮಾರ್ಕೆಟ್ ಪೊಲೀಸರು ೧೫೦ ಜನರ ವಿರುದ್ಧಎಫ್ಐಆರ್ ದಾಖಲಿಸಿದ್ದಾರೆ.ರಾಜ್ಯ ಸರ್ಕಾರದ ವಿರುದ್ಧಘೋಷಣೆ ಕೂಗಿ ಮಹಾರಾಷ್ಟçಕ್ಕೆಜೈಕಾರ ಹಾಕಿದ, ಭಾಷಾ ವಿಷಬೀಜ ಬಿತ್ತುವ ಕೆಲಸ, ದೊಂಬಿ ಎಬ್ಬಿಸುವ ಹುನ್ನಾರ ಆರೋಪಗಳ ಮೇಲೆ ಪಿಎಸ್ಐ ಹಾವಣ್ಣಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಂಇಎಸ್ ಮಾಜಿ ಶಾಸಕ ಮನೋಹರಕಿನೇಕರ್, ಶುಭಂ ಶೇಳಕೆ ಸೇರಿದಂತೆ ೧೫೦ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಕೇಸ್ದಾಖಲಾಗುತ್ತಿದ್ದಂತೆ ಆರೋಪಿಗಳು ಬೆಳಗಾವಿಯಿಂದ ಪಲಾಯನ ಮಾಡಿದ್ದಾರೆ.ಪರಾರಿಯಾದ ಆರೋಪಿಗಳನ್ನ ಬಂಧಿಸಲು ಬೆಳಗಾವಿ ಮಾರ್ಕೆಟ್ ಪೊಲೀಸರು ಬಲೆ ಬೀಸಿದ್ದಾರೆ.



