ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ವಿರುದ್ಧ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಯಾತ್ರೆಯ ಮಾರ್ಗ ಬದಲಾವಣೆಯಿಂದಾಗಿ ರಾಜ್ಯದ ಜೋರ್ಹತ್ ನಗರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಧಿಕಾರಿಯೊಬ್ಬರು ಮಾತನಾಡಿ, ಅನುಮತಿಯಂತೆ ಯಾತ್ರೆ ಕೆಬಿ ರಸ್ತೆಯತ್ತ ಸಾಗಬೇಕಿತ್ತು.ಬದಲಾಗಿ ನಗರದಲ್ಲಿ ಬೇರೆ ಮಾರ್ಗದಲ್ಲಿ ಯಾತ್ರೆ ಕೈಗೊಳ್ಳಲಾಯಿತು. ಇದರಿಂದ ಆ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜನರ ಏಕಾಏಕಿ ನುಗ್ಗಿದ್ದರಿಂದ ಕೆಲವರು ಬಿದ್ದು ನೂಕುನುಗ್ಗಲು ಉಂಟಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಯಾತ್ರೆ ಮತ್ತು ಅದರ ಮುಖ್ಯ ಆಯೋಜಕರ ವಿರುದ್ಧ ಜೋರ್ಹತ್ ಸದರ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಅಧಿಕಾರಿಯ ಪ್ರಕಾರ, ಯಾತ್ರೆಯು ಜಿಲ್ಲಾಡಳಿತದ ನಿಯಮಗಳನ್ನು ಅನುಸರಿಸಿಲ್ಲ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಪ್ರಮುಖ ಕಾರಣವಾಗಿದೆ.