ನೆಲಮಂಗಲ: ಜಿಯೋ ಮಾರ್ಟ್ ಗೋಡೌನ್ಗೆ ಬೆಂಕಿ ಬಿದ್ದು, ಕೊಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೆಂಕಿಯ ತೀವ್ರತೆಗೆ ಸಂಪೂರ್ಣ ಒಂದೂವರೆ ಎಕರೆಯಲ್ಲಿದ್ದ ಕಟ್ಟಡ ಹಾಗೂ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಅಗ್ನಿ ಅವಘಡದಿಂದ ನೆಲಮಂಗಲ ಹೆದ್ದಾರಿಯಲ್ಲಿ ಭಾರೀ ಹೊಗೆ ಆವರಿಸಿಕೊಂಡಿತ್ತು. ಇದರಿಂದ ಗೋಡೌನ್ ಒಳಗೆ ತೆರಳಲು ಅಗ್ನಿಶಾಮಕ ಸಿಬ್ಬಂದಿ ಪರದಾಡಿದ್ದರು. ಬಳಿಕ ಜೆಸಿಬಿ ಮೂಲಕ ಗೋಡೆ ಒಡೆದು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸುಮಾರು 10 ಅಗ್ನಿಶಾಮಕ ವಾಹನ ಬಳಸಿ ರಾತ್ರಿ ಪೂರ್ತಿ ಹೋರಾಡಿ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಜಿಯೋ ಮಾರ್ಟ್ ಗೋಡೌನ್ಗೆ ಬೆಂಕಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ



