ಮೆಕ್ಸಿಕೋ: ಮೆಕ್ಸಿಕೋದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಸೂಪರ್ ಮಾರ್ಕೆಟ್ ಗೆ ಬೆಂಕಿ ಬಿದ್ದು ೨೩ ಮಂದಿ ಸಜೀವ ದಹನವಾಗಿದ್ದಾರೆ.
ಮೆಕ್ಸಿಕೋದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಹರ್ಮೊಜಿಲ್ಲೊದ ವಾಲ್ಡೋ ಸೂಪರ್ ಮಾರ್ಕೆಟ್ ನಲ್ಲಿ ಸ್ಫೋಟ ಸಂಭವಿಸಿ ೨೩ ಜನರು ಸಾವನ್ನಪ್ಪಿದ್ದಾರೆ.೧೨ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸತ್ತವರಲ್ಲಿ ಮಕ್ಕಳೂ ಇದ್ದಾರೆ ಎಂದು ನಂಬಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಾರ್ವಜನಿಕ ಭದ್ರತಾ ಅಧಿಕಾರಿಗಳು ದಾಳಿಯನ್ನು ತಳ್ಳಿಹಾಕಿದರು.
ದುರದೃಷ್ಟವಶಾತ್ ನಾವು ಕಂಡುಕೊAಡ ಬಲಿಪಶುಗಳಲ್ಲಿ ಹಲವರು ಅಪ್ರಾಪ್ತ ವಯಸ್ಕರು” ಎಂದು ಸೋನೊರಾ ರಾಜ್ಯದ ಗವರ್ನರ್ ಅಲ್ಫೊನ್ಸೊ ಡುರಾಜೊ ಅವರು ಸಾವಿನ ಸಂಖ್ಯೆಯನ್ನು ಘೋಷಿಸುತ್ತಾ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.ಸ್ಫೋಟ ಸಂಭವಿಸಿದ ಹರ್ಮೊಸಿಲ್ಲೊ ನಗರದ ಆಸ್ಪತ್ರೆಗಳಲ್ಲಿ ಬದುಕುಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.



