ಬೆAಗಳೂರು: ಮಲ್ಲೇಶ್ವರಂನ ಪೈಪ್ ಲೈನ್ ರೋಡ್ನಲ್ಲಿರುವ ಫರ್ನಿಚರ್ ಶಾಪ್ ಒಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ರಾತ್ರಿ ೨:೩೦ರ ಸುಮಾರಿಗೆ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಐದು ಕೋಟಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅಲ್ಲದೇ ಬೆಂಕಿ ಅಕ್ಕಪಕ್ಕದ ಅಪಾರ್ಟ್ಮೆಂಟ್ನ ೩ ಮನೆಗಳಿಗೂ ಆವರಿಸಿದೆ. ೧೩ ಅಗ್ನಿಶಾಮಕ ಸಿಬ್ಬಂದಿಯಿAದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಅಗ್ನಿ ಅವಘಡದ ವೇಳೆ ಅಂಗಡಿ ಒಳಗಡೆ ಸುಮಾರು ೧೦ ಜನ ಕೆಲಸಗಾರರು ಮಲಗಿದ್ದರು. ಅಕ್ಕಪಕ್ಕದ ನಿವಾಸಿಗಳು ಅವರನ್ನು ಎಚ್ಚರಿಸಿದ್ದಾರೆ. ಶಾರ್ಟ್ ಸಕ್ರೂ÷್ಯಟ್ನಿಂದ ಬೆಂಕಿ ತಗಲಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.