ಗೌರಿಬಿದನೂರು: ಪಟಾಕಿಗಳು ಮಾರುವವರು ಜಿಲ್ಲಾಧಿಕಾರಿಗಳ ಪರವಾನಿಗೆ ಪಡೆದಿರಬೇಕು. ಪಟಾಕಿಗಳನ್ನು ಸರ್ಕಾರ ನಿಗದಿ ಪಡಿಸಿರುವ ಸ್ಥಳದಲ್ಲಿ ಮಾತ್ರ ಮಾರಾಟ ಮಾಡಬೇಕು.ಎಂದು ತಹಶಿಲ್ದಾರು ಮಹೇಶ್ ಪತ್ರಿ ತಿಳಿಸಿದರು.
ಇವರು ತಾಲೂಕು ಕಛೇರಿ ಸಭಾಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೋಂದಿಗೆ ದೀಪಾವಳಿ ಹಬ್ಬದಲ್ಲಿ ಪಟಾಕಿ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿ, ಮಾರಾಟದ ಸ್ಥಳದಲ್ಲಿ ಸಿಸಿ ಕ್ಯಾಮರಾಗಳು ಅಳವಡಿಸಬೇಕು.ಆಂಬುಲೆನ್ಸ್ ಅಗ್ನಿ ಮಾಪಕ ದಳ ಸೌಲಭ್ಯವಿರುತ್ತೆ.
ಈ ಬಾರಿ ಪಟಾಕಿಗಳು ಮಾರಾಟ ಮಾಡಲು ಆಚಾರ್ಯ ಶಾಲೆಯ ಆವರಣದಲ್ಲಿ ಏರ್ಪಾಟು ಮಾಡಲಾಗಿದೆ.ಈ ತನಕ ಪಟಾಕಿ ಅಂಗಢಿ ಇಡಲು 12 ಅರ್ಜಿಗಳು ಬಂದಿವೆ. ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳ ಪರವಾನಿಗೆಗೆ ಕಳಿಹಿಸಿಕೊಡಲಾಗುವುದು. ಮೂಲ ಸೌಲಭ್ಯಗ ಳೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗದುಕೊಳ್ಳಬೇಕು.
ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.ಉಪಯೋಗಿಸುವವರು ಸಹಾ ಹಸಿರು ಪಟಾಕಿಗಳನ್ನು ಮಾತ್ರ ಸುಡಬೇಕು. ಹೆಚ್ಚು ಶಬ್ದ ಮಾಲಿನ್ಯ,ವಾಯು ಮಾಲಿನ್ಯ ಆಗುವ ಪಟಾಕಿಗಳನ್ನು ಸಿಡಿಸಿದರೇ ಅಂತಹವರ ಮೇಲೆ ಕಾನೂನುಕ್ರಮ ಜರಿಗಿಸ ಲಾಗುವುದು ಎಂದು ವೃತ್ತನಿರೀಕ್ಷಕರು ತಿಳಿಸಿದರು.
ಪಟಾಕಿಗಳ ಸ್ಟಾಕನ್ನು ಇಡಲು ಗೋದಾಮಿಗೆ ಸಹಾ ಅನುಮತಿ ಪಡೆದಿರ ಬೇಕು. ಸುರಕ್ಷಿತ ಸ್ಥಳದಲ್ಲಿ ಮಾತ್ರ ಪಟಾಕಿಗಳ ಸ್ಟಾಕು ಇಡಬೇಕಾಗಿರುತ್ತೆ.ನಗರದ ನಾಲ್ಕು ಕಡೆ ಚೆಕ್ ಪೋಸ್ಟ್ ಏರ್ಪಾಟು ಮಾಡಿ ಅಕ್ರಮ ಪಟಾಕಿ ರವಾನಿಸದಂತೆ ಕ್ರಮ ಜರಿಗಿಸಲಾಗುವುದು ಎಂದರು.ಆಸ್ಪತ್ರೆ,ಶಾಲೆಗಳ ಸಮೀಪ ಪಟಾಕಿ ಸುಟ್ಟುವುದು ನಿಷೇದ ಎಂದು ತಹಶಿಲ್ದಾರು ತಿಳಿಸಿದರು.
ಹಸಿರು ಪಟಾಕಿ ಸುಟ್ಟು ಸುರಕ್ಷಿತವಾಗಿ ಹಬ್ಬ ವನ್ನು ಆಚರಿಸಿ ಎಂದು ದೀಪಾವಳಿ ಶುಭ ಹಾರೈಸಿದರು. ಇಂದಿನ ಸಭೆಯಲ್ಲಿ ಪೌರಾಯುಕ್ತೆ ಗೀತ, ವೃತ್ತನಿರೀಕ್ಷಕರಾದ ಸತ್ಯನಾರಾಯಣ ಮುಂತಾದವರು ಭಾಗವಹಿಸಿದ್ದರು