ದೊಡ್ಡಬಳ್ಳಾಪುರ: ತಾಲೂಕಿನ ಕೊನಘಟ್ಟ ಗ್ರಾಮದ ಸಿಂಚರ ಕ್ರಿಕೆಟ್ ಮೈದಾನ ದೊಡ್ಡಬಳ್ಳಾಪುರ ಇಲ್ಲಿ ಇದೇ 26,27 ಹಾಗೂ 28 ರಂದು ಮೊದಲ ಬಾರಿಗೆ ನಡೆದ ದೊಡ್ಡಬಳ್ಳಾಪುರ ಕ್ರಿಕೆಟ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ನಲ್ಲಿ ಪೈನಲ್ ಪಂದ್ಯವನ್ನು ವೀಕ್ಷಿಸಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ .ಎಂ. ಹರೀಶ್ ಗೌಡ ಅವರು ಮಾತನಾಡಿ ಕ್ರೀಡಾ ಸ್ಪೂರ್ತಿಯಿಂದ ಎಲ್ಲಾ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾಸ್ಪೂರ್ತಿ ಮೆರೆಯಬೇಕು, ತಂದೆ ತಾಯಿಗಳಿಗೆ ಗೌರವ ನೀಡಬೇಕು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು.
ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ಉತ್ತೇಜನ ನೀಡುವುದಾಗಿ ತಿಳಿಸಿದರು.ನಂತರ ಮಾತನಾಡಿದ ನಗರಸಭಾ ಸ್ಥಾಯೀ ಸಮಿತಿ ಅದ್ಯಕ್ಷ ವಿ.ಎಸ್.ರವಿಕುಮಾರ್ ಅವರು ತಾಲ್ಲೂಕಿನಲ್ಲಿ ಉತ್ತಮ ಕ್ರಿಕೆಟ್ ಇತರೆ ಕ್ರೀಡೆಗಳಲ್ಲಿ ಉತ್ತಮ ಅಟಗಾರರಿದ್ದಾರೆ,ನಗರಸಭೆಯ ಕ್ರೀಡಾ ಅನುದಾನ ಹಾಗೂ ಸರ್ಕಾರ ನೀಡುವಂತಹ ಸೌಲಭ್ಯಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ನಗರ ಭಾಗದಲ್ಲಿ ನಡೆಯುವ ಕ್ರೀಡೆಗಳಿಗೆ ನಗರಸಭೆಯಲ್ಲಿನ ಕ್ರೀಡಾ ನಿಧಿಯನ್ನು ನೀಡಲು ಸಹಕರಿಸುವುದಾಗಿ ತಿಳಿಸಿದರು.ಪೈನಲ್ ಪಂದ್ಯದಲ್ಲಿ ವಿಜೇತ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಹಾಗೂ ಮೆಡಲ್ ವಿತರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕ್ರೀಡಾಪಟುಗಳು ಸೇರಿದಂತೆ ಸ್ಥಳೀಯ ಕ್ರೀಡಾಪ್ರೇಮಿಗಳು ಉಪಸ್ಥಿತರಿದ್ದರು.