ದೇವನಹಳ್ಳಿ: ಜನರು ಯೋಜನೆಗಳ ಬಗ್ಗೆ ಹೆಚ್ಚು ತಿಳಿದುಕೊಂಡು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಸರಕಾರ ರೂಪಿಸಿರುವ ಯೋಜನೆಗಳನ್ನು ಪ್ರತಿ ಗ್ರಾಮಸ್ಥರು ಪಡೆದುಕೊಳ್ಳಿ ಎಂದು ವಿಶ್ವನಾಥಪುರ ಗ್ರಾ.ಪಂ ಅಧ್ಯಕ್ಷೆ ವೆಂಕಟಮ್ಮ ದೊಡ್ಡ ಗಂಗಪ್ಪ ಹೇಳಿದರು.
ದೇವನಹಳ್ಳಿ ತಾಲೂಕಿನ ಸೋಲೂರು ಗ್ರಾಮದಲ್ಲಿ ವಿಶ್ವನಾಥಪುರ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಹಮ್ಮಿಕೊಳ್ಳಲಿಕ್ಕೆ ಸಾಕಷ್ಟು ಅವಕಾಶಗಳಿವೆ ,ಗ್ರಾಮಗಳ ಪ್ರತಿಯೊಬ್ಬ ರೈತನೂ ನಮ್ಮ ಹೊಲ ನಮ್ಮ ದಾರಿ ಎಂದು ಅರಿತು ಅವುಗಳ ಅಭಿವೃದ್ಧಿ ಸಾಧ್ಯ, ಕೃಷಿಹೊಂಡ ಕಲ್ಯಾಣೀ, ಅಮೃತ ಸರೋವರ ಕುಂಟೆ ಅಭಿವೃದ್ಧಿ ಸ್ಮಾಶನ ಅಭಿವೃದ್ಧಿ ಹಾಗು ಕೂಸಿನ ಮನೆ 6 ರಿಂದ 3 ವರ್ಷದೋಳಗಿನ ಮಕ್ಕಳ ಆರೈಕೆ ಕೇಂದ್ರ ಯೋಜನೆ ಅನುಷ್ಠಾನಗಳನ್ನು ತಿಳಿಸಿದರು
ಗ್ರಾಮ ಪಂಚಾಯಿತಿ ಸದಸ್ಯರಾದ ಸೀಕಾಯನಹಳ್ಳಿ ಎಸ್ .ಎಂ. ವಿನಯ್ ಕುಮಾರ್ ಮಾತನಾಡಿ ಗ್ರಾಮ ಸಭೆಯು ಸ್ಥಳೀಯ ಆಡಳಿತ ಮತ್ತು ಅಭಿವೃದ್ಧಿಯನ್ನು ನಿಯಂತ್ರಿಸುತ್ತದೆ ಮತ್ತು ಗ್ರಾಮದ ಕಲ್ಯಾಣಕ್ಕಾಗಿ ಅಗತ್ಯ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಪಾರದರ್ಶಕತೆ ಉದ್ದೇಶಗಳಿಗಾಗಿ ಮತ್ತು ಗ್ರಾಮ ಪಂಚಾಯತಿಗಳ ಉತ್ತಮ ಕಾರ್ಯನಿರ್ವಹಣೆಗೆ ಗ್ರಾಮ ಸಭೆ ಬಹಳ ಮುಖ್ಯ ಎಂದರು.
ಗ್ರಾಮ ಸಭೆಯಲ್ಲಿ ನೋಡೆಲ್ ಅಧಿಕಾರಿಗಳು ಸುಧಾ, ಗ್ರಾ.ಪಂ ಉಪಾಧ್ಯಕ್ಷೆ ಕಲ್ಪನಾ ನಾರಾಯಣಸ್ವಾಮಿ, ಸದಸ್ಯರಾದ ಮಂಗಳ, ಭವ್ಯ, ಮುನೇಗೌಡ, ವಿ.ನವೀನ್, ಅಂಜಿನಮ್ಮ, ಸಿ.ನಾಗಮ್ಮ, ದಿವ್ಯ ಭಾರತಿ, ನಾಗರಾಜ, ರವಿ ಎಸ್.ಎ, ಅಂಜಿನಮ್ಮ, ಎಸ್. ನರಸಿಂಹರಾಜು, ಲಕ್ಷ್ಮೀನರಸಮ್ಮ, ಶ್ರೀನಿವಾಸ್, ವೆಂಕಟಚಲಯ್ಯ, ಬಿ.ಸಿ ಸುಂದರೇಶ್, ಮಂಜುಳಾ ಮಂಜುನಾಥ್, ಪಿಡಿಒ ಬೀರೇಶ್ ಎಚ್. ಸಿ, ಕಾರ್ಯದರ್ಶಿ ಎಂ. ಪದ್ಮಮ್ಮ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಚಂದ್ರಶೇಖರ್ ಟಿ. ಎ ಸೇರಿದಂತೆ ಮಹಿಳಾ ಸಂಘದ ಸದಸ್ಯರು, ಸುತ್ತ-ಮುತ್ತಲಿನ ಗ್ರಾಮಸ್ಥರು, ಆಶಾ ಕಾಯಕರ್ತೆಯರು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.