ದೇವನಹಳ್ಳಿ: ಎಲ್ಲಾ ಹಳ್ಳಿಗಳಲ್ಲಿ ಸಭೆಗಳನ್ನು ಮಾಡ ಬೇಕು, ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಬಿದಲೂರು ಗ್ರಾಪಂ ಅಧ್ಯಕ್ಷ ಎಸ್.ಪಿ.ಮುನಿರಾಜು ಹೇಳಿದರು.ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮ ಪಂಚಾಯತಿಯ ಅಣಿಘಟ್ಟದ ದೇವಾಲಯದ ಆವರಣದಲ್ಲಿ 2023-24ನೇ ಸಾಲಿನ ಮೊದಲನೇ ಹಂತದ ಗ್ರಾಮಸಭೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಿಎಸ್ಆರ್ ಅನುದಾನದಲ್ಲಿ ಬಿದಲೂರು ಮಾದರಿ ಪಂಚಾಯತಿಗಳ ನಿರ್ಮಾಣವಾಗುತ್ತಿದೆ, ಕಸವಿಲೇವಾರಿ ಘಟಕ ಮತ್ತು ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆಗಳನ್ನು ಕೊಳವೆಬಾವಿ ಗಳ ಮುಖಾಂತರ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ಪಿಎಂಶ್ರೀ ಯೋಜನೆಯಡಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ.ಜಿ,ಯುಕೆಜಿ ಮತ್ತು 1ರಿಂದ 5ನೇ ತರಗತಿವರಗೂ ಆಂಗ್ಲ ಮಾಧ್ಯಮಶಾಲೆಯೂ ಪ್ರಾರಂಭವಾಗಿದ್ದು,
ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ ಗ್ರಾಮದ ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದರು.ಜೀವನ ಸುರಕ್ಷತೆಗಾಗಿ 116 ವಿಶೇಷ ಚೇತನರಿಗೆ ಹೆಲ್ಮಟ್ ಮತ್ತು ಸೋಲಾರ್ ದೀಪಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಣೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ವಾಟರ್ ಮ್ಯಾನ್ ಸಿಬ್ಬಂದಿಗಳಿಗೆ ಕಿರುಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಡಾ.ಅನಿಲ್ ಕುಮಾರ್, ಬಿದಲೂರು ಗ್ರಾ.ಪಂ. ಉಪಾಧ್ಯಕ್ಷೆ ಸಿ.ಎಂ.ಅನುರಾಧ, ಸದಸ್ಯರಾದ ಹರ್ಷಿತ.ಸಿ, ನಾಗರಾಜು ಎಂ, ಪ್ರಕಾಶ್.ಆರ್, ನಾಗರಾಜು.ಎ, ನಂದಕುಮಾರ್ ಬಿ.ಎಸ್, ಎನ್. ರಾಜಶೇಖರ್, ಎಂ. ಎನ್. ಪ್ರದೀಪ್, ವಿನೀತ್ ಕುಮಾರ್, ವರಮಹಾಲಕ್ಷ್ಮಿ, ನರಸಮ್ಮ, ಜ್ಞಾನೇಶ್ವರಿ, ಚಂದ್ರಕಲಾ ಗೌರಿ ಟಿ.ಎ, ಸ್ಪೂರ್ತಿ, ಅನಿತಾ, ವಿಮಲಾ, ಪಿಡಿಒ ಕೆ.ಸಿ. ಸಿದ್ದರಾಜು, ಕಾರ್ಯದರ್ಶಿ ಹೆಚ್.ಸಿ.ಚಂದ್ರಶೇಖರ್ ಸೇರಿದಂತೆ ಹಲವಾರು ಮುಖಂಡರು ಮತ್ತು ಗ್ರಾಮಸ್ಥರು ಮತ್ತಿತರರು ಇದ್ದರು.