ಬೆಂಗಳೂರು: ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ಒಟ್ಟು ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂತಾಮಣಿ ರಸ್ತೆಯಲ್ಲಿ ಅತಿ ವೇಗವಾಗಿ ಕಾರು ಚಾಲಕ ಚಲಾಯಿಸಿ ಎರಡು ಮೋಟಾರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಚಿಂತಾಮಣಿ ರಸ್ತೆಯ ಕೃಷ್ಣ ಸಾಗರ್ ಹೋಟೆಲ್ ಮುಂಭಾಗ ಮಧ್ಯರಾತ್ರಿ ಸುಮಾರು ಒಂದೂವರೆ ಗಂಟೆಗೆ ಕಾರು ಚಾಲಕ ಅತಿ ವೇಗವಾಗಿ ಕಾರು ಚಲಾಯಿಸಿ ಬತ್ಡೇ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದನು.ಮೃತರು ಹಾಗೂ ಗಾಯಾಳುಗಳು ಬೆಂಗಳೂರಿನ ಶಿವಾಜಿನಗರ ನಿವಾಸಿಗಳಾಗಿ ರುತ್ತಾರೆ, ಇಬ್ಬರು ಮೃತರಲ್ಲಿ ಒಬ್ಬನ ಗುರುತು ಮೊಹಮ್ಮದ್ ಪೈಸೆಲ್ ಎಂದು ಗುರುತು ಪತ್ತೆಯಾಗಿರುತದೆ.
ಮೂರು ಜನ ಗಾಯಾಳುಗಳನ್ನು ಹೊಸಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಹೊಸಕೋಟೆ ಪೊಲೀಸರು ಕಾರು ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತಾರೆ.ಮತ್ತೊಂದು ಪ್ರಕರಣದಲ್ಲಿ ಸ್ಕಾರ್ಪಿಯೋ ಕಾರು ಪಾದಾಜಾರಿಗೆ ಡಿಕ್ಕಿ ಹೊಡೆದ ಪರಿಣಾಮ ರತ್ನಮಾ (40), ಮೇಧಾಶ್ರೀ ಶಾಲೆಯ ಆಯಾ ಮೃತಪಟ್ಟಿರುತ್ತಾರೆ.
ಹಲಸಿನ ಹಳ್ಳಿ ಗೇಟ್ ಬಳಿ ಇರುವ ನಂದಿ ಗ್ರಾಂಡ್ ಹೋಟೆಲ್ ಮುಂಭಾಗ ಈ ದುರ್ಘಟನೆ ಸಂಭವಿಸಿರುತ್ತದೆ.ನೆಲಮಂಗಲ ಸಂಚಾರಿ ಟ್ರಾಫಿಕ್ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ತಿಪ್ಪಗೊಂಡನಹಳ್ಳಿ ಸಿದ್ದಾರ್ಥ ಕಾಲೇಜಿಗೆ ಸೇರಿದ ಹೋಟೆಲ್ ಮುಂಬಾಗ ಗೂಡ್ಸ್ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಶಿವರಾಜಮ್ಮ ಮೃತಪಟ್ಟಿರುತ್ತಾರೆ.
ಮತ್ತೊಂದು ನೆಲಮಂಗಲ ಸಂಚಾರಿ ಪೊಲೀಸ್ ಠಾಣ ದೊಡ್ಡಬಳ್ಳಾಪುರದ ರಸ್ತೆಯಲ್ಲಿರುವ ರಂಗನಾಥ್ ಬಾರ್ ಬಳಿ ಟಾಟಾ ಏಸ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿರುತ್ತದೆ.ಮೋಟರ್ ಬೈಕ್ ಸವಾರ ಅಲ್ಲಪ್ಪ 40 ವರ್ಷ ಮೃತಪಟ್ಟಿರುತ್ತಾನೆ.