ಬೆಂಗಳೂರು: ನಿನ್ನೆ ರಾತ್ರಿ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಐವರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಜಿನಗರ ಬ್ರಿಡ್ಜ್ ಕೆಳಗೆ ಸಿಮೆಂಟ್ ಮಿಕ್ಸರ್ ಮಿನಿ ಲಾರಿ ಒಳಗೆ ಕುಳಿತಿದ್ದ ಕೆಲಸಗಾರ ಚಾಲಕ ತಕ್ಷಣ ಬ್ರೇಕ್ ಹಾಕಿದ ಕಾರಣ ಹಿಂಬದಿ ಕುಳಿತಿದ್ದ ಛತ್ತೀಸ್ಗಡದ ದೀಪಕ್ ೧೭ ವರ್ಷದ ಯುವಕ ಕೆಳಗೆ ಬಿದ್ದ ಪರಿಣಾಮ ಮಿನಿ ಲಾರಿಯಲ್ಲಿ ಹಿಂಬದಿ ಅಳವಡಿಸಿದ್ದ ಟ್ರಾಲಿ ಆತನ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ರಾಜಾಜಿನಗರ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಅಪಘಾತ ಪ್ರಕರಣ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ದಾಸರಹಳ್ಳಿ ಬಳಿ ಕೆಎಸ್ಆರ್ಟಿಸಿ ಬಸ್ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿರುತ್ತಾನೆ.
ತಿಮ್ಮರಾಜು ಎಳನೀರು ವ್ಯಾಪಾರಿ ೨೫ ವರ್ಷದವನಾಗಿದ್ದು ನಿನ್ನೆ ರಾತ್ರಿ ೧೦:೦೦ ಸುಮಾರಿಗೆ ಟಿ ದಾಸರಹಳ್ಳಿ ಜಂಕ್ಷನ್ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟಿರುತ್ತಾನೆ.
ಪೀಣ್ಯ ಸಂಚಾರಿ ಪೊಲೀಸರು ಅಪಘಾತ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಮತ್ತು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಬಳಿ ಕ್ಯಾಂಟರ್ ಗಾಡಿ ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ರಾಜಪ್ಪ ೬೦ ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾರೆ, ರಾತ್ರಿ ೭:೦೦ ಸುಮಾರಿಗೆ ಅಪಘಾತ ಸಂಭವಿಸಿರುತ್ತದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಲೆಂಡನಹಳ್ಳಿ ಬಳಿ ಮೋಟರ್ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರುಗಳು ಹಿಂಬದಿಯಿAದ ಕ್ಯಾಂಟರ್ ಲಾರಿಗೆ ವೇಗವಾಗಿ ಚಲಾಯಿಸಿ ಸ್ವತಃ ಡಿಕ್ಕಿ ಹೊಡೆದುಕೊಂಡು ಸ್ಥಳದಲ್ಲೇ ಪವನ್ ೨೦ ವಯಸ್ಸಿನ ಯುವಕ ಮೃತಪಟ್ಟರೆ ಅಶೋಕ್ ಹಿಂಬದಿ ಸವಾರ ತೀವ್ರ ತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟಿಯ ಹೆದ್ದಾರಿ ೪೮ ಬೆಂಗಳೂರು ತುಮಕೂರು ರಸ್ತೆಯ ಟಿಸಿಐ ಫ್ಲೆöÊಓವರ್ ಬಳಿ ಬಳಿ ಲಾರಿಗೆ ಮೋಟರ್ ಸೈಕಲ್ ಸವಾರ ಅತಿ ವೇಗವಾಗಿ ಹಿಂಬದಿಯಿAದ ಲಾರಿಗೆ ಡಿಕ್ಕಿ ಹೊಡೆದುಕೊಂಡು ಮಧು ೨೮ ವರ್ಷದ ಯುವಕ ಮೃತಪಟ್ಟರೆ ರಂಗನಾಥ್ ಗಾಯ ಸಂಭವಿಸಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿರುತ್ತಾನೆ.



