ಬೆಂಗಳೂರು: ನಗರದ ಹಿಂದೂ ಧಾರ್ಮಿಕ ಸಭಾ ಭವನದಲ್ಲಿಂದು ನೂತನ ಶ್ರೀ ವಿಶ್ವ ಬ್ರಾಹ್ಮಣ ಹೆರಿಟೇಜ್ ಟ್ರಸ್ಟ್ ಅನ್ನು ಶ್ರೀ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಮಠದ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಉದ್ಘಾಟಿಸಿದರು.
ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳಿಗೆ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ತುಲಾಭಾರ ನಡೆಸಿ ಗುರುವಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಧ್ಯಕ್ಷರಾದ ಹಾಗೂ ಶ್ರೀ ವಿಶ್ವ ಬ್ರಾಹ್ಮಣ ಹೆರಿಟೇಜ್ ಟ್ರಸ್ಟಿನ ಗೌರವಧ್ಯಕ್ಷರಾದ ಡಾ. ಬಿ. ಎಂ. ಉಮೇಶ್ ಕುಮಾರ್ ಅವರು ವಿಶ್ವಕರ್ಮ ಸಮಾಜದ ಪಂಚ ಕಸುಬುಗಳನ್ನು ಸಂರಕ್ಷಿಸುವ ಅಗತ್ಯವಿದೆ.
ಪಂಚ ಕಸುಬುಗಳೇ ವಿಶ್ವಕರ್ಮ ಸಮಾಜದ ಹೆಗ್ಗುರುತು. ನಾವು ಪ್ರಪಂಚದಲ್ಲೆಲ್ಲ ಗುರುತಿಸಿಕೊಂಡಿದ್ದು ಈ ಪಂಚ ಕಸುಬುಗಳ ಮೂಲಕವೇ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶ್ವಕರ್ಮರು ಪಂಚ ಕಸುಬಿನಿಂದ ವಿಮುಖರಾಗುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ನಮ್ಮ ಪಂಚ ಕಸುಬುಗಳನ್ನು ಸಂರಕ್ಷಿಸಿ, ನಮ್ಮತನವನ್ನು ಗಟ್ಟಿಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್ ಅಧ್ಯಕ್ಷ ಡಿ. ಪಿ. ರುದ್ರಮೂರ್ತಿ, ಪ್ರಧಾನ ಕಾರ್ಯದರ್ಶಿ ಎ. ಎಂ. ಮಹೇಶ್ ಇತರರು ಉಪಸ್ಥಿತರಿದ್ದರು.
Leave a Review