ಬೆಂಗಳೂರು: ರಾಷ್ಟ್ರ ಮೂರು ವಿಧಾನಸಭೆಗೆ ನಡೆಯುತ್ತಿರುವ ಚುನಾವಣಾ ಸಂಬAಧ ಇಂದು ಮತದಾನ ನಡೆಯುತ್ತಿದ್ದು, ಬಿರುಸಿನಿಂದಲೇ ಮತಪ್ರಕ್ರಿಯೆ ನಡೆದಿದೆ.
ಅಸ್ಸಾಂ, ಕೇರಳ, ಪುದುಚೇರಿ ವಿಧಾನಸಭೆಗಳಿಗೆ ಮತದಾನ ಬಿರುಸಿನಿಂದ ಸಾಗಿದೆ. ಬೆಳಿಗ್ಗೆ 11 ಗಂಟೆ ವೇಳೆಗೆ ಅಸ್ಸಾಂನಲ್ಲಿ ಶೇ. 38, ಕೇರಳದಲ್ಲಿ ಶೇ.33 ಹಾಗೂ ಪುದುಚೆರಿಯಲ್ಲಿ ಶೇ.37ರಷ್ಟು ಮತದಾನ ನಡೆದಿತ್ತು.
ಅಸ್ಸಾಂನಲ್ಲಿ ಅಲ್ಲಿನ ಮುಖ್ಯಮಂತ್ರಿ ಹಿಮಬಿಸ್ವಾ ಅವರು ಬೆಳಿಗ್ಗೆ ಗೌಹಟಿಯ ಕಾಮಕ್ಯ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕೇರಳ ವಿಧಾನಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಗಣ್ಯರು, ಮಾಲಿವುಡ್ಪ್ರಮುಖ ನಟರು ಬೆಳಗ್ಗೆಯೇ ಮತದಾನ ಮಾಡಿದರು.
ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಬಿರುಸಿನ ಮತದಾನ



