ಮಾಗಡಿ: ಪಟ್ಟಣದ ಹೊಸಪೇಟೆ ಶ್ರೀ ಬಿಸಿಲು ಮಾರಮ್ಮ ದೇವಿಯ ಊರಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಅವರ ಅಭಿಮಾನಿ ಬಳಗದ ವತಿಯಿಂದ ವಿಶೇಷ ಹೂವಿನ ಅಲಂಕಾರವನ್ನು ಮಾಡಿಸಲಾಗಿದೆ ಎಂದು ಹೆಚ್.ಎಂ.ರೇವಣ್ಣ ಅಭಿಮಾನಿಯಾದ ಹೊಸಪೇಟೆ ತಮ್ಮಯ್ಯ ಹೇಳಿದರು.
ಪಟ್ಟಣದ ಹೊಸಪೇಟೆಯಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು ನಮ್ಮ ಪೂರ್ವಿಕರ ಕಾಲದಿಂದಲೂ ಬಿಸಿಲು ಮಾರಮ್ಮ ದೇವಿಯ ಹಬ್ಬವನ್ನು ತಿರುಮಲೆ ಹಾಗೂ ಹೊಸಪೇಟೆ ಗ್ರಾಮಸ್ಥರು ಒಟ್ಟಿಗೆ ಆಚರಿಸುತ್ತಿದ್ದೆವು.ಹೆಚ್.ಎಂ.ರೇವಣ್ಣರವರು ಹತ್ತಾರು ವರ್ಷಗಳ ಹಿಂದೆ ಹೊಸಪೇಟೆ ಗ್ರಾಮಸ್ಥರ ಮನವಿ ಮೇರೆಗೆ ಮಾರಮ್ಮ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರು. ಅವರಿಗೆ ಹೊಸಪೇಟೆಯ ಸರಳ ಸಜ್ಜನರ ಪರವಾಗಿ ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅಂದಿನಿಂದ ಇಂದಿನವರೆಗೂ ದೇವಿಗೆ ನಿರಂತರವಾಗಿ ವಿಶೇಷ ಹೂವಿನ ಅಲಂಕಾರ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಮ್ಮಯ್ಯ ತಿಳಿಸಿದರು.
ಎಚ್.ಎಂ.ರೇವಣ್ಣರವರ ಅಭಿಮಾನಿ ಬಳಗದ ಪದಾಧಿಕಾರಿ ಮನೋಹರ್ ಮಾತನಾಡಿ ಈ ಪ್ರಪಂಚದಲ್ಲಿ ದೇವರ ಆಶೀರ್ವಾದವಿಲ್ಲದಿದ್ದರೆ ಒಂದು ಹುಲ್ಲುಕಡ್ಡಿಯೂ ಅಲುಗಾಡಲು ಸಾಧ್ಯವಿಲ್ಲ.ಅದರಂತೆ ಮಾರಮ್ಮ ದೇವಿಗೆ ಹೆಚ್.ಎಂ.ರೇವಣ್ಣರವರ ಸಹಕಾರ ಬೆಂಬಲದೊಂದಿಗೆ ಸಾಕಷ್ಟು ವರ್ಷದಿಂದ ಸ್ವಂತಃ ಸ್ನೇಹಿತರು ಹೊಸಪೇಟೆ ಗ್ರಾಮಸ್ಥರು ಮತ್ತು ದಾನಿಗಳ ಸಹಾಯದಿಂದ ದೇವಿಯ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇವೆ ಮುಂದೆಯೂ ಮಾಡುತ್ತೇವೆ.
ದೇವಿಯ ಆಶೀರ್ವಾದದಿಂದ ಹೊಸಪೇಟೆ ಸಮಸ್ತ ಜನತೆಗೆ ತಾಯಿಯು ಒಳಿತು ಮಾಡಲೆಂದು ಪ್ರಾರ್ಥಿಸಿರುವುದಾಗಿ ಮನೋಹರ್ ಸ್ಪಷ್ಟಪಡಿಸಿದರು.
ದೇವಿಯ ಭಕ್ತಾಧಿಗಳಾದ ಹೊಸಪೇಟೆ ಕಿಟ್ಟಿ ಚಂದ್ರಣ್ಣ, ರೇವಣ್ಣಸಿದ್ದಪ್ಪ, ಭರತಕುಮಾರ್, ಗುರುಸಿದ್ದಪ್ಪ, ಕಾರ್ತಿಕ್, ಮಹಂತೇಶ್, ವಸಂತಕುಮಾರ್, ಚಿಕ್ಕರೇವಮ್ಮ ಸೇರಿದಂತೆ ಮತ್ತಿತರಿದ್ದರು.