ಬೆಂಗಳೂರು: ಬಸವೇಶ್ವರನಗರ ಸುಭಾಷ್ ಚಂದ್ರ ಬೋಸ್ ಕಿರು ಅರಣ್ಯದಲ್ಲಿ ಪರಿಸರಕ್ಕಾಗಿ ಯುವ ಜನರ ತಂಡವು ಯುವ ಜನರಿಗಾಗಿ ಜನಪದ ಕಲೆಗಳ ಕಲಿಕೆಯ ಶಿಬಿರವನ್ನು ಆಯೋಜಿಸಲಾಗಿತ್ತು ಇದರ ಉದ್ಘಾಟನೆಯನ್ನು ಮಾಜಿ ನಗರ ಪಾಲಿಕೆ ಸದ್ಯಸರಾದ ಎಸ್.ಎಚ್.ಪದ್ಮರಾಜ್ ಅವರು ಭೂಮಿಕ ಲಕ್ಷಣ್, ಶ್ರೀಮತಿ ರೂಪ ಮೋಹನ್,ನಯನ ಲಕ್ಷ್ಮಿ ರವರು ನೆರವೇರಿಸಿದರು.
ಜನಪದ ಕಲೆಗಳು ನೆಲಮೂಲ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳು ಈ ಕಲೆಗಳು ಉಳಿದಾಗ ಮಾತ್ರ ನಮ್ಮ ನೆಲದ ಸಂಸ್ಕೃತಿ ಉಳಿಯುತ್ತದೆ ಮನುಷ್ಯ ಇದರಿಂದ ದೂರವಾದಂತೆ ಮಾನವೀಯತೆಯಿಂದ ದೂರವಾದಂತೆ ಎಂದು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದ ಮಾಡಿದ್ದ ಉಪನ್ಯಾಸಕರಾದ ಯೇಜಸ ಪಾಷ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಕಲಾವಿದರಾದ ಗೊರವ ಮಲ್ಲೇಶ್ ರವರು ಆಗಮಿಸಿ ಯವ ಜನರಿಗೆ ಮೂಲ ಜನಪದದ ಅಗತ್ಯತೆಗಳ ಬಗ್ಗೆ ತಿಳಿಸಿಕೊಟ್ಟರು ಸುಮಾರು ಐವತ್ತು ಯುವ ಜನರು ಈ ತರಭೇತಿಗೆ ಹೆಸರನ್ನು ನೊಂದಾಯಿಸಿದರು.