ಬೆಂಗಳೂರು: ಎಂ.ಎಸ್. ಕಾಲೇಜು, ಮನೋರಾಯನಪಾಳ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಜನಪದ ಕಲೆಗಳ ತರಬೇತಿ
ಶಿಬಿರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಶ್ರೀಯುತ ರಾಜೇಶ್ ಎನ್. ಅವರು ಉದ್ಘಾಟಿಸಿದರು. ಈ ಶಿಬಿರದಲ್ಲಿ ಜನಪದ
ಕಲೆಗಳ ತರಬೇತಿದಾರರಾಗಿ ಗೊರವರ ಮಲ್ಲೇಶ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಜನಪದ ನೃತ್ಯಗಳ ಕುರಿತು ತರಬೇತಿ ನೀಡಿದರು.
ಅತಿಥಿಗಳಾಗಿ ಶೈಕ್ಷಣಿಕ ನಿರ್ದೇಶಕರಾದ ಶ್ರೀಮತಿ ರೇಖಾ ಹಾಗೂ ಕನ್ನಡ ಉಪನ್ಯಾಸಕರಾದ ಶ್ರೀ ಯೇಜಸ್ ಪಾಷ ಅವರು ಭಾಗವಹಿಸಿದ್ದರು. ವಿದ್ಯಾರ್ಥಿಗಳು
ಉತ್ಸಾಹದಿಂದ ಪಾಲ್ಗೊಂಡು ಜನಪದ ಕಲೆಗಳ ಮಹತ್ವವನ್ನು ಅರಿತುಕೊಂಡರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.



