ಬೆಂಗಳೂರು: ಎಸ್. ನೋವೆಲ್ ಅವರು ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‍ಸಿ ತಂಡವು ಬಿಡಿಎಫ್‍ಎ ಸೂಪರ್ ಡಿವಿಷನ್ ಫುಟ್‍ಬಾಲ್ ಲೀಗ್ ಚಾಂಪಿಯನ್‍ಷಿಪ್‍ನ ಪಂದ್ಯದಲ್ಲಿ 1-0ಯಿಂದ ಯಂಗ್ ಚಾಲೆಂಜರ್ಸ್ ತಂಡವನ್ನು ಪರಾಭವಗೊಳಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ನೋವೆಲ್ 60ನೇ ನಿಮಿಷ ಇಂಡಿಪೆಂಡೆಂಟ್ಸ್ ಪರ ನಿರ್ಣಾಯಕ ಗೋಲು ದಾಖಲಿಸಿದರು.ಮತ್ತೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ತಂಡವು 3-0ಯಿಂದ ಎಫ್‍ಸಿ ಡೆಕ್ಕನ್ ತಂಡವನ್ನು ಮಣಿಸಿತು.
ಸ್ಪೋರ್ಟಿಂಗ್ ತಂಡದ ವಿ. ವಿಘ್ನೇಶ್ (9ನೇ), ಸೈಯ್ಯದ್ ಉಮೈರ್ (19ನೇ), ಆರಿಫ್ ಶೇಖ್ (64ನೇ) ತಲಾ ಒಂದು ಗೋಲು ಗಳಿಸಿದರು. ಇಂದಿನ ಪಂದ್ಯಗಳು: ಕೊಡಗು ಎಫ್‍ಸಿ- ಬೆಂಗಳೂರು ಯುನೈಟೆಡ್ ಎಫ್‍ಸಿ (ಮಧ್ಯಾಹ್ನ 1.30), ಬಿಯುಎಫ್‍ಸಿ- ಎಫ್‍ಸಿ ಅಗ್ನಿಪುತ್ರ (ಮಧ್ಯಾಹ್ನ 3.30).
Leave a Review