ಕನಕಪುರ: ನಗರಸಭೆಯ ರಾಜ್ಯ ಹೊರಗುತ್ತಿಗೆ ನೌಕರರಿಗೆ ಸರ್ಕಾರದಿಂದ ನೇರ. ವೇತನ ಪಾವತಿ ಹಾಗೂ ನೇರ ಖಾಯಾಂ ಆದೇಶವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ನಗರಸಭೆ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು.
ನಗರಸಭೆ ಕಚೇರಿ ಎದುರು ಪತ್ರಕರ್ತ ರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರವು ನಗರಸಭೆಯ ಹೊರಗುತ್ತಿಗೆ ನೌಕರರ ನೇರ ವೇತನ ಪವಾತಿ ಹಾಗೂ ಖಾಯಂಮ್ಮಾತಿ ಆದೇಶ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಯ ಹೊರಗುತ್ತಿಗೆ ಕಾರ್ಮಿಕರು ಮನವಿ ಪತ್ರ ಸಲ್ಲಿಸಲಿದ್ದೇವೆ.
ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಪ್ರಮುಖ ವಾಗಿ ನೇರ ವೇತನ ಪಾವತಿ ಹಾಗೂ ಕಳೆದ 10-15 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಸಬೇಕೆಂದು ಒತ್ತಾಯಿಸಿದರು.ಸಂಘದ ತಾಲೂಕು ಅಧ್ಯಕ್ಷ ಪ್ರದೀಪ್, ಉಪಾಧ್ಯಕ್ಷ ನಾಗೇಶ್ ರಾವ್, ರಾಮಣ್ಣ, ಜಯರಾಂ, ಪ್ರಶಾಂತ್, ದೊರೆಸ್ವಾಮಿ, ವೆಂಕಟೇಶ್, ವೆಂಕಟರಮಣ, ಅಯ್ಯಪ್ಪ, ಮುನಿವೆಂಕಟಯ್ಯ ನೀರುಸರಬರಾಜು, ಕಸವಿಲೇವಾರಿ, ವಾಹನ ಚಾಲಕರು, ಲೋಡರ್ಸ್, ಹಾಗೂ ಇತರೆ ಕಾರ್ಮಿಕರು ಸೇರಿದಂತೆ ಹಲವರು ಹಾಜರಿದ್ದರು.