ತಿ.ನರಸೀಪುರ: ದಿನಾಂಕ 26ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಬಿರುಸಿನ ಪ್ರಚಾರ ನಡೆಸಿದರು.
ತಾಲ್ಲೂಕು ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಂಗಸಮುದ್ರ, ಕುಪ್ಯಾ, ತುಂಬಲ, ಕೆಂಪಯ್ಯನಹುಂಡಿ, ಹಾಗೂ ಪಟ್ಟಣದ ಪುರಸಭಾ ವ್ಯಾಪ್ತಿಯ ತಿರುಮಕೂಡಲು, ಹೆಳವರಹುಂಡಿ, ಭಗವಾನ್ ಚಿತ್ರಮಂದಿರ ಸರ್ಕಲ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಭ್ಯರ್ಥಿ ಸುನೀಲ್ ಬೋಸ್ ಪರ ಭರ್ಜರಿ ಪ್ರಚಾರ ನಡೆಸಿ ಡಾ. ಯತೀಂದ್ರ ಸಿದ್ರಾಮಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ಶ್ರೀಮಂತರಿಂದ ತೆರಿಗೆ ವಸಲ ಮಾಡಿ ಬಡವರಿಗೆ ನೀಡಿ ಅನುಕೂಲ ಮಾಡಿದರೆ, ಬಿಜೆಪಿ ಅದಕ್ಕೆ ತದ್ವಿರುದ್ದವಾಗಿ ಬಡವರಿಂದ ತೆರಿಗೆ ವಸೂಲಿ ಮಾಡಿ ಶ್ರೀಮಂತರ ಜೇಬು ತುಂಬಿಸುತ್ತಿದೆ.
ಕೇವಲ ಸುಳ್ಳು ಭರವಸೆಗಳನ್ನ ನೀಡಿ ನರೇಂದ್ರ ಮೋದಿ ಅಧಿಕಾರ ನಡೆಸುತ್ತಿದ್ದಾರೆ. ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತಂದು ಅವರ ಬದುಕನ್ನು ಹಾಳು ಮಾಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ನುಡಿದಂತೆ ನಡೆದ ನಮ್ಮ ಕಾಂಗ್ರೆಸ್
ಸರ್ಕಾರದ ಯೋಜನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗಳು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ 1 ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆ ಸೇರಿದಂತೆ 10 ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದೆ.ಮಹಾಲಕ್ಷ್ಮಿ ಯೋಜನೆಯಲ್ಲಿ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1ಲಕ್ಷ ರೂಗಳನ್ನು ನೀಡುತ್ತದೆ. ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಭಾಗ್ಯಮ್ಮ, ಕುಪ್ಯಾ ಪ್ರಭಾಕರ್, ಕೆಂಪಯ್ಯನ ಹುಂಡಿ ಮಹಾದೇವಣ್ಣ, ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ತಾ.ಅಧ್ಯಕ್ಷ ಚೇತನ್, ಮಾಜಿ ಉಪಾಧ್ಯಕ್ಷ ತಿರುಮ ಕೂಡಲು ಗಾಡಿಪುಟ್ಟು, ಮಾಜಿ ತಾ. ಪಂ. ಅಧ್ಯಕ್ಷ ತುಂಬಲಾ ಅಂದಾನಿ, ಕಿರಗಸೂರು ಗ್ರಾ. ಪಂ. ಅಧ್ಯಕ್ಷೆ ಚಂದ್ರಮ, ಎಂ. ರಮೇಶ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ, ಪುರಸಭಾ ಸದಸ್ಯರಾದ ತುಂಬಲ ಪ್ರಕಾಶ್, ಬಾದಾಮಿ, ಮಂಜು ಮೆಡಿಕಲ್ ನಾಗರಾಜು, ಅಹಮದ್ ಸಯೀದ್, ಸೋಮಣ್ಣ, ಕಾಂಗ್ರೆಸ್ ಮುಖಂಡ ಕಾಂತರಾಜು, ಮನ್ನಹುಂಡಿ ಮಹೇಶ್, ಕಾಂಗ್ರೇಸ್ ಯುವ ಮುಖಂಡ ಹೇಮಂತ್, ಮಿಥುನ್, ಗಣೇಶ್, ಕುಪ್ಯಾ ಜಯರಾಮು, ಬಣ್ಣ ಬಸವರಾಜು, ತ್ರಿವೇಣಿನಗರ ಮಂಜುನಾಥ್, ಜಿಲ್ಲಾ ಹಿರಿಯ ಕಾರ್ಯದರ್ಶಿ ಸಕ್ಕಳ್ಳಿ ಬಸವರಾಜು, ಟೌನ್ ಅಧ್ಯಕ್ಷ ಅಂದಾನಿ ಗೌಡ, ಕನಕ ಪಾಪು, ಯುವ ಯುವ ಮುಖಂಡ ಸಂತೋಷ್ ಕಿರಾಳು, ಇನ್ನಿತರರು ಹಾಜರಿದ್ದರು.