ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಘೋಷಣೆ ಯಾಗಿ ಮೂರು ದಿನಗಳಾದ್ರು ಇನ್ನೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಯಾವ ಪಾರ್ಟಿಯಲ್ಲೂ ಯಾರು ಅಭ್ಯರ್ಥಿ ಅನ್ನೋದು ಘೋಷಣೆಯಾಗಿಲ್ಲ ದಿನಕ್ಕೊಂದು ಬದಲಾವಣೆ ಒಬ್ಬೊಬ್ಬ ಅಭ್ಯರ್ಥಿ ಹೆಸರು ಕೇಳಿಬರುತ್ತಿದೆ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದು ಮಾಜಿ ಕೇಂದ್ರಮಂತ್ರಿ ಹಾಗೂ ಮಾಜಿ ಸಂಸದ ವೀರಪ್ಪಮೊಯಿಲಿಯವರನ್ನೇ ಅಂತಿಮಗೊಳಿಸಿ ಅಭ್ಯರ್ಥಿ ಯನ್ನಾಗಿಸಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಯಲುವಹಳ್ಳಿ ರಮೇಶ್ ಮತ್ತು ಮಾಜಿ ಶಾಸಕ ಎಂ ಶಿವಾನಂದ ಅಗ್ರಹಿಸಿದರು.
ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರೆಂದು ಘೋಷಣೆಯಾಗಿಲ್ಲ ಕಾಂಗ್ರೆಸ್ ಪಕ್ಷದಲ್ಲಿ ರಕ್ಷಾ ರಾಮಯ್ಯ, ವೀರಪ್ಪಮೊಯಿಲಿ ಹಾಗು ಶಿವಶಂಕರರೆಡ್ಡಿ ಟಿಕೆಟ್ಗೆ ಲಾಬಿ ನಡೆಸುತಿದ್ದರೆ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನನಗೆ ಆಯ್ಕೆ ಮಾಡುವಂತೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ವಿಶ್ವನಾಥ್ ಮಗ ಅಲೋಕ್ ವಿಶ್ವನಾಥ್ ಪೈಫೋಟಿ ನಡೆಸುತಿದ್ದಾರೆ.
ಈ ಮಧ್ಯೆ ಹೈ ಕಮಾಂಡ್ ಒಮ್ಮೆ ಜೆಡಿಎಸ್ ವರಿಷ್ಟ ಮಾಜಿ ಸಿಎಂ ಕುಮಾರಸ್ವಾಮಿಯನ್ನ ಅಭ್ಯರ್ಥಿ ಮಾಡುವುದಾಗಿ ಒಮ್ಮೊಮ್ಮೆ ಸುಮಲತಾರನ್ನ ಅಭ್ಯರ್ಥಿ ಮಾಡುತ್ತೇವೆ ಸುದ್ದಿ ಹರಿದಾಡುತಿದ್ದರೆ ಕಾಂಗ್ರೆಸ್ಲ್ಲಿ ರಕ್ಷಾ ರಾಮಯ್ಯಗೆ ಪೈನಲ್ ಆಗಿದೆ ಘೋಷಣೆಯೊಂದೆ ಬಾಕಿ ಇದೆ ಅನ್ನೋದು ಗಾಳಿ ಸುದ್ದಿ ಹರಿದಾಡುತ್ತಲೆ.
ಇದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಗ್ಗೆ ಜನರಲ್ಲಿ ಗೊಂದಲ ಮೂಡುತ್ತಿದೆ ಅದಕ್ಕಾಗಿ ಮಾಜಿ ಸಿಎಂ ಮಾಜಿ ಕೇಂದ್ರ ಮಂತ್ರಿವೀರಪ್ಪಮೊಯಿಲಿಯವರನ್ನೆ ಅಭ್ಯರ್ಥಿಯಾಗಿ ಘೋಷಿಸಿ ಇಗಾಗಲೆ ಎರಡು ಭಾರಿ ಗೆದ್ದು ನೂರಾರು ಕೋಟಿ ಅನುಧಾನ ತಂದು ಅಭಿವೃದ್ದಿ ಕಾಮಗಾರಿಗಳು ನಡೆಸಿದ್ದಾರೆ ಅವರು ಹಿರಿಯರು ಈ ಬಾರಿ ಅವರಿಗೆ ಕೊನೆಯ ಚುನಾವಣೆ ಆಗಲಿದೆ.
ಹಾಗಾಗಿವೀರಪ್ಪಮೊಯಿಲಿಯವರಿಗೆ ಟಿಕೆಟ್ ಘೋಷಿಸಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಯಲುವಹಳ್ಳಿ ರಮೇಶ್ ಹಾಗು ಮಾಜಿ ಶಾಸಕ ಎಂ. ಶಿವಾನಂದ್ ಹೈ ಕಮಾಂಡ್ ಮೇಲೆ ಒತ್ತಡ ಹಾಕಿ ಆಗ್ರಹ ಪಡಿಸಿದ್ದಾರೆ.ಸುದ್ದಿ ಗೋಷ್ಟಿಯಲ್ಲಿ ಕಾಂಗ್ರೆಸ್ ಡಿಜಿಪಿ ವಕೀಲ ವಿನೊದ್ ಕುಮಾರ್, ಕಳವಾರ ಶ್ರೀದರ್, ಮಹಿಳಾ ಬ್ಲಾಕ್ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಮತ್ತು ಇತರರು ಇದ್ದರು.