ಬೊಮ್ಮನಹಳ್ಳಿ: ನಿಸ್ವಾರ್ಥ ಜನ ಸೇವೆಯಲ್ಲಿ 60 ವರ್ಷಗಳನ್ನು ಕಳೆದ ಮಾಜಿ ನಗರ ಸಭಾ ಸದಸ್ಯ ಮುರಳಿಧರ್ ಸೇವೆ ಅನನ್ಯವಾಗಿದೆ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ಶ್ಲಾಘನೆ ವ್ಯಕ್ತಪಡಿಸಿದರು.ಅವರು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಅರಕೆರೆ ವಾರ್ಡ್ ಮಾಜಿ ನಗರಸಭಾ ಸದಸ್ಯ ಹಾಗೂ ಸಮಾಜ ಸೇವಕರಾದ ಅರಕೆರೆ ಮುರಳಿ ರವರ 60 ನೇ ಜನ್ಮದಿನ ಅಂಗವಾಗಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ಮಹಿಳೆಯರಿಗೆ ಕೊಡುಗೆಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸದಾ ಜನ ಸೇರಿಯಲ್ಲಿ ನಿರತರಾಗಿರುವ ದಂಪತಿಗಳು:- ಕಳೆದ 35 ವರ್ಷಗಳಿಂದ ಅರಕೆರೆ ಮುರಳಿಯವರು ತಮ್ಮನ್ನು ತಾವು ಜನಸೇವೆ ಹಾಗೂ ಸಕ್ರೀಯಾ ರಾಜಕಾರಣದಲ್ಲಿ ತೊಡಗಿಸಿದ್ದು ಇವರ ಸಹಕಾರ ಮತ್ತು ಬೆಂಬಲದೊಂದಿಗೆ ಶ್ರೀಮತಿ ಭಾಗ್ಯ ಲಕ್ಷ್ಮೀ ಮುರಳಿ ಅವರು ಸಹ ಬಿಬಿಎಂಪಿ ಸದಸ್ಯರಾಗಿ ಕರೋನ ಹಾಗೂ ಪ್ರವಾಹದಂತ ಸಂಕಷ್ಟದ ದಿನಗಳಲ್ಲಿ ಜನರ ಮನೆ ಬಾಗಿಲುಗಳಲ್ಲಿ ನಿಂತು ಸಹಾಯ ಹಸ್ತವನ್ನು ನೀಡಿದ್ದಾರೆ.
ಈ ಇಬ್ಬರು ದಂಪತಿಗಳಿಗೆ ಜನ ಸೇವೆ ಎಂಬುದು ರಕ್ತಗತವಾಗಿ ಬಂದಿದೆ ಇಂತಹ ಸಂದರ್ಭದಲ್ಲಿ ಷಷ್ಠಿಪೂರ್ತಿಯ ಸಂಭ್ರಮವು ಅಭಿಮಾನಿಗಳಿಗೆ ಹೆಚ್ಚು ಹರ್ಷ ತಂದಿದೆ ಆ ಭಗವಂತನು ಇನ್ನು ಹೆಚ್ಚಿನ ಶಕ್ತಿ ನೀಡಲಿ ಎಂಬುದಾಗಿ ಶುಭ ಆರೈಸಿದರು
ಇದೇ ಸಂದರ್ಭದಲ್ಲಿ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಜನ ಸೇವೆಯಲ್ಲಿ ನಿರತವಾಗಿರುವ ದಂಪತಿಗಳಿಗೆ ಶುಭಕೋರಿದರು.
ಇದೇ ಸಂದರ್ಭದಲ್ಲಿ ಜಯನಗರ ವಿ.ಕ್ಷೇತ್ರದ ಶಾಸಕರಾದ ಸಿ.ಕೆ ರಾಮಮೂರ್ತಿ , ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಪುರುಷೋತ್ತಮ್ ರವಿ , ಮಾಜಿ ಬಿಬಿಎಂಪಿ ಸದಸ್ಯರಾದ ಭಾಗ್ಯಲಕ್ಷ್ಮಿ ಮುರಳಿ, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಹಾಜರಿದ್ದರು ಹಾಗೂ ಮುರಳಿ ಹಾಗೂ ಭಾಗ್ಯಲಕ್ಷ್ಮೀ ಮುರಳಿ ಅವರಿಗೆ ಶುಭಕೋರಿದರು.ಇದೇ ಸಂದರ್ಭದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಸಂಘಟನೆಯ ಕಾರ್ಯಕರ್ತರು ಶುಭಕೋರಿದರು.