This is the title of the web page
This is the title of the web page

ಹಳೆ ಪಿಂಚಣಿ ವ್ಯವಸ್ಥೆ ಜಾರಿ ಪ್ರತಿಗಾಮಿ ನಡೆ ಆರ್‍ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್

ನವದೆಹಲಿ: ಕೆಲವು ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ಮತ್ತೆ ಜಾರಿಗೊಳಿಸುತ್ತಿರುವುದು ಪ್ರತಿಗಾಮಿ ನಡೆ ಎಂಬುದರದಲ್ಲಿ ಅನುಮಾನವೇ ಇಲ್ಲ ಎಂದು ಆರ್‍ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ.
ಕೆಲವು ಸರ್ಕಾರಗಳ ಈ ನಡೆಯು ಜನಸಾಮಾನ್ಯರಿಗೆ ತೊಂದರೆ ಉಂಟುಮಾಡಿ, ಸರ್ಕಾರಿ ನೌಕರರಿಗೆ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸುವಂಥದ್ದು ಎಂದು ಅವರು ಹೇಳಿದ್ದಾರೆ.

ಒಪಿಎಸ್ ಅಡಿಯಲ್ಲಿ ನೌಕರರಿಗೆ ನಿವೃತ್ತಿಯ ನಂತರದಲ್ಲಿ, ಕಡೆಯ ಸಂಬಳದ ಶೇಕಡ 50ರಷ್ಟು ಮೊತ್ತವು ಪಿಂಚಣಿಯಾಗಿ ಸಿಗುತ್ತದೆ. ‘ವಿತ್ತೀಯ ಹೊಣೆಗಾರಿಕೆ ವಿಚಾರದಲ್ಲಿ ನಮ್ಮ ಬದ್ಧತೆಯ ದೃಷ್ಟಿಯಿಂದ, ನಮ್ಮ ಸುಧಾರಣೆಗಳ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಒಪಿಎಸ್ ಜಾರಿಯು ಪ್ರತಿಗಾಮಿ ನಡೆಯಾಗುತ್ತದೆ’ ಎಂದು ಸುಬ್ಬರಾವ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಜನಸಾಮಾನ್ಯರಲ್ಲಿ ಬಹುತೇಕರಿಗೆ ಸಾಮಾಜಿಕ ಸುರಕ್ಷತಾ ಯೋಜನೆಗಳು ಲಭ್ಯವಿರುವುದಿಲ್ಲ. ಸರ್ಕಾರಿ ನೌಕರರಿಗೆ ಸಾರ್ವಜನಿಕರ ಹಣದಿಂದ ಇನ್ನಷ್ಟು ವಿಶೇಷ ಸೌಲಭ್ಯಗಳನ್ನು ಕಲ್ಪಿಸುವುದು ನೈತಿಕವಾಗಿಯೂ ತಪ್ಪಾಗುತ್ತದೆ, ಹಣಕಾಸಿನ ದೃಷ್ಟಿಯಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ’ ಎಂದು ಅವರು ಹೇಳಿದ್ದಾರೆ.