ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿ ನಾಲ್ವರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.ಆರೋಪಿಗಳು ಡಿ.31ರಂದು ವಿವಿಧೆಡೆ ಡ್ರಗ್ಸ್ ಸರಬರಾಜು ಮಾಡಲು ಅಪಾರ ಪ್ರಮಾಣದ ಆರ್ಡರ್ ಪಡೆದಿದ್ದರು.
ಬಂಧಿತರನ್ನು ಗಂಗೊಂಡನಹಳ್ಳಿ ಅನಿಲ್ (21), ಅಂದ್ರಹಳ್ಳಿ ಕಾರ್ತಿಕ್ (18), ನವೀನ್ (20) ಮತ್ತು ದೊಂಬರಹಳ್ಳಿ ಮಂಜುನಾಥ್ (19) ಎಂದು ಗುರುತಿಸಲಾಗಿದೆ.ಆರೋಪಿಗಳಿಂದ 2 ಕೆಜಿ ಗಾಂಜಾ, ಎರಡು ಬೈಕ್ ಹಾಗೂ ಚಾಕುಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಆ ಪ್ರದೇಶದ ಮನೆ ಮೇಲೆ ದಾಳಿ ನಡೆಸಿದಾಗ ನಿಷೇಧಿತ ಡ್ರಗ್ಸ್ ಪತ್ತೆಯಾಗಿವೆ. ನಾಲ್ವರು ಆರೋಪಿಗಳು ಹೊಸ ವರ್ಷದ ಮುನ್ನಾದಿನದಂದು ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡಲು ಭಾರಿ ಮೊತ್ತದ ಆರ್ಡರ್ ತೆಗೆದುಕೊಂಡಿರುವುದು ಆರಂಭಿಕ ವಿಚಾರಣೆಯಲ್ಲಿ ಪೊಲೀಸರಿಗೆ ಗೊತ್ತಾಗಿದೆ.
ಆರೋಪಿಗಳು ಹೋಟೆಲ್ಗಳು, ಢಾಬಾಗಳು, ಲಾಡ್ಜ್ಗಳು ಮತ್ತು ಟ್ರಕ್ ಪಾರ್ಕಿಂಗ್ ಪ್ರದೇಶಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.