ಬೆಂಗಳೂರು: ವಿಜಯಪುರ, ಸೂರ್ಯ ನಗರ ಮತ್ತು ಎಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮೂರು ಪ್ರತ್ಯೇಕ ಅಪಘಾತಗಳು ಸಂಭವಿಸಿ ನಾಲ್ಕು ಜನ ವ್ಯಕ್ತಿಗಳು ಮೃತಪಟ್ಟಿರುತ್ತಾರೆ.
ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅವತಿ ಗ್ರಾಮದ ಬಳಿ ಕ್ಯಾಂಟರ್ ಗಾಡಿ ಮಿನಿ ಲಾರಿಯನ್ನು ಓವರ್ ಟೇಕ್ ಮಾಡುವ ಬರದಲ್ಲಿ ಎದುರಿಗೆ ಬರುತ್ತಿದ್ದ ಕ್ಯಾಂಟರಿಗೆ ಡಿಕ್ಕಿ ಹೊಡೆದ ಪರಿಣಾಮ ವಾಸಿಮ್ 30 ಹಾಗೂ ಶಕೀಬ್ 26 ವರ್ಷ ಸ್ಥಳದಲ್ಲಿ ಮೃತಪಟ್ಟರೆ ಇಬ್ಬರು ವ್ಯಕ್ತಿಗಳಿಗೆ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂರ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹುಸ್ಕೂರ್ ರಸ್ತೆ ಬಳಿ ಪಾದಚಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ರವಿಕುಮಾರ್ 47 ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾನೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



