ಬೆಂಗಳೂರು: ಕಾರ್ಬನ್ ಮಾನಾಕ್ಸೆöಡ್ ಸೇವನೆಯಿಂದ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಯಂತ್(೨೫), ವೀರೇಂದ್ರ(೨೪), ತಡೈ(೨೫) ಮತ್ತು ಧನಂಜಯ(೨೦) ಎಂಬುವರೇ ಮೃತ ದುರ್ದೈವಿ ಯುವಕಗಳಾಗಿದ್ದಾರೆ. ಕೋಕಕೋಲ ಫ್ಯಾಕ್ಟರಿಯ
ವೇರ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ಜನ ಅಸ್ಸಾಂ ರಾಜ್ಯದ ಯುವಕರುಗಳು ಅನ್ನ ಮಾಡುವಾಗ ಮಾನಾಕ್ಸೆöಡ್ ಬಿಡುಗಡೆಯಾಗುವ ಸಮಯದಲ್ಲಿ ಕಿಟಿಕಿ ಬಾಗಿಲುಗಳನ್ನು ತೆಗೆಯದ ಕಾರಣ ಕಾರ್ಬನ್ ಮಾನಾಕ್ಸೆöಡ್ ಹೊರ ಹೋಗದಂತೆ ಮನೆಯಲ್ಲಿ ಉಳಿದಿದ್ದರಿಂದ
ಅದನ್ನು ಸೇವಿಸಿ ಮೃತಪಟ್ಟಿರಬಹುದೆಂದು ಸೂಲಿಬೆಲೆ ಪೊಲೀಸ್ ಇನ್ಸ್ಪೆಕ್ಟರ್ ಶಂಕೆ ವ್ಯಕ್ತಪಡಿಸಿರುತ್ತಾರೆ.
ರಾತ್ರಿ ೧೦:೦೦ ಸುಮಾರಿಗೆ ಈ ಘಟನೆ ಸಂಭವಿಸಿರಬಹುದು, ಆದರೆ ನಮಗೆ ಈ ಮಾರಸಂದ್ರದಲ್ಲಿ ವಾಸಿಸುತ್ತಿರುವ ಮೃತರುಗಳ ಬಿಲ್ಡಿಂಗ್ ಮಾಲೀಕ ರಾತ್ರಿ ಹನ್ನೆರಡುವರೆ ಸುಮಾರಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತಪಟ್ಟವರನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿರುತ್ತಾರೆ.



