ವಲೆನ್ಸಿಯಾ (ಸ್ಪೇನ್): ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಜುಗರಾಜ್ ಸಿಂಗ್ ಅವರ ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಇಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 5-4 ಗೋಲುಗಳಿಂದ ಮಣಿಸಿತು.
ಐದು ರಾಷ್ಟ್ರಗಳ ಟೂರ್ನಿಯಲ್ಲಿ ಭಾರತಕ್ಕೆ ಇದು ಮೊದಲ ಗೆಲುವು. ಜುಗರಾಜ್ (20ನೇ ಮತ್ತು 60ನೇ ನಿಮಿಷ) ಗೋಲು ಗಳಿಸಿದರೆ, ಹರ್ಮನ್ ಪ್ರೀತ್ 25 ಮತ್ತು 56ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪಂದ್ಯದ ಮೊದಲಾರ್ಧದಲ್ಲಿ ವಿವೇಕ್ ಸಾಗರ್ ಪ್ರಸಾದ್ (16ನೇ ನಿಮಿಷ) ಒಂದು ಗೋಲು ಬಾರಿಸಿದರು.
ಟೂರ್ನಿಯಲ್ಲಿ ಸತತ ಸೋಲು ಅನುಭವಿಸಿದ್ದ ಭಾರತ, ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು. ಸ್ಪೇನ್ ವಿರುದ್ಧ 0-1, ಬೆಲ್ಜಿಯಂ ವಿರುದ್ಧ 2-7 ಹಾಗೂ ಜರ್ಮನಿ ವಿರುದ್ಧ 2-3 ಅಂತರದಲ್ಲಿ ಸೋತಿತ್ತು.