ಬೆಂಗಳೂರು: ಹೊಸ ವರ್ಷದ ಪಾರ್ಟಿ ಟಿಕೆಟ್ ಹೆಸರಲ್ಲಿ ಪ್ರತಿಷ್ಠಿತ ಸ್ಟಾರ್ ಹೋಟೆಲ್ ಜೆಎಂ ಮ್ಯಾರಿಯೇಟ್ ಹೆಸರಲ್ಲಿ ಕಿಡಿಗೇಡಿಗಳು ಮಹಿಳೆಗೆ ವಂಚನೆ ನಡೆಸಿದ್ದಾರೆ.ಹೊಸ ವರ್ಷಕ್ಕೆ ಪಾರ್ಟಿ ಮಾಡಲು ಎಂದು ಹೇಮ ಮಾಲಿನಿ ಎಂಬ ಮಹಿಳೆ ಪಾರ್ಟಿ ಟಿಕೆಟ್ಗಾಗಿ ಹೋಟೆಲನ್ನು ಸಂಪರ್ಕ ಮಾಡಿದಾಗ ಸುರೇಂದರ್ ಕುಮಾರ್ ಎಂಬಾತ ಸಂಪರ್ಕಕ್ಕೆ ಬಂದಿದ್ದು ಟಿಕೆಟ್ ನೀಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ್ದಾನೆ.
ಹೊಸ ವರ್ಷವನ್ನು ಭರ್ಜರಿಯಾಗಿ ಆಚರಿಸಬೇಕು ಎಂದು ಹೇಮ ಅವರು ಸ್ಟಾರ್ ಹೋಟೆಲ್ ಜೆಎಂ ಮ್ಯಾರಿಯೇಟ್?ಗೆ ಕರೆ ಮಾಡಿ ಪಾರ್ಟಿ ಟಿಕೆಟ್ ಬೇಕೆಂದಿದ್ದರು. ಕರೆ ಮಾಡಿದಾಗ ಹೇಮಾ ಅವರ ಸಂಪರ್ಕಕ್ಕೆ ಬಂದ ಸುರೇಂದರ್ ಕುಮಾರ್ ಎಂಬಾತ ಒಂದು ಟಿಕೆಟ್ಗೆ ಬರೋಬ್ಬರಿ 19,500 ರೂ, ಇದೆ. ಈಗಲೇ ಹಣ ಕಳುಹಿಸಿ ಎಂದಿದ್ದ.
ಇದನ್ನು ಒಪ್ಪಿದ ಹೇಮ ಹಣವನ್ನು ಗೂಗಲ್ ಪೇ ಮಾಡಿದ್ದರು. ನಂತರ ಮ್ಯಾನೇಜರ್ ಹೆಸರು ಹೇಳಿ ಟಿಕೆಟ್ ಪಡೆಯಲು ಸೂಚಿಸಿದ್ದ. ಹೇಮ ಅವರು ಹೋಟೆಲ್ ಬಳಿ ಹೋಗಿ ಮ್ಯಾನೇಜರ್ ಹೆಸರು ಹೇಳಿದಾಗ ಆ ಹೆಸರಿನ ಸಿಬ್ಬಂದಿಯೇ ಇಲ್ಲ ಎನ್ನುವುದು ಪತ್ತೆಯಾಗಿದೆ. ನಂತರ ವಂಚನೆಯಾಗಿರುವುದು ಪತ್ತೆಯಾಗಿದೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.