ಬೆಂಗಳೂರು: ಸಿಸಿಬಿ ಪೊಲೀಸರು ಸಾರ್ವಜನಿಕರಿಗೆ ವಾಟ್ಸಪ್ ಮತ್ತು ಟೆಲಿಗ್ರಾಂ ಆಪ್ ಗಳ ಮುಖಾಂತರ ವರ್ಕ್ ಫ್ರಮ್ ಹೋಮ್ ಕೆಲಸ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆಯಿಂದ ಲಕ್ಷಾಂತರ ರೂಗಳನ್ನು ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ 9 ಜನ ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಿರುತ್ತಾರೆ.
ಅಮೀರ್ ಅಲಿ , ಹೀನಾಯತ್, ನಯಾಜ್, ಅಜ್ಮಲ್, ಮನೀಶ್ ಸತೀಶ್ ನಾಯಾನರಾಜ್ , ಶಶಿಕಾಂತ ಎಂಬವರನ್ನು ಬಂಧಿಸಿರುತ್ತಾರೆ
ಇವರುಗಳು 20043 ಪ್ರಕರಣಗಳಲ್ಲಿ ವಂಚಿಸಿದ್ದ ಹಣದ ಒಟ್ಟು ಮೌಲ್ಯ 158 ಕೋಟ್ಯಂತರ ರೂಪಾಯಿಗಳಾಗಿರುತ್ತವೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾರ್ವಜನಿಕರಿಂದ ವಂಚಿಸಿದ್ದ ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ಖಾತೆ ತೆರೆದು ವರ್ಗಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗಳ ಪೈಕಿ ಈಗಾಗಲೇ 30 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದ್ದು ಫ್ರೀಜ್ ಮಾಡಲಾಗಿರುವ ಮೊತ್ತವು 62 ಲಕ್ಷ ಆಗಿರುತ್ತದೆ.
ಅಲ್ಲದೆ ಕೃತ್ಯಕ್ಕೆ ಬಳಸಿದ್ದ ವಿವಿಧ ಕಂಪನಿಯ 11 ಮೊಬೈಲ್ ಫೋನ್ ಗಳು ಎರಡು ಲ್ಯಾಪ್ಟಾಪ್ಗಳು 15 ಸಿಮ್ ಕಾರ್ಡ್ ಗಳು ಮತ್ತು 9 ಬುಕ್ ಗಳು ಹಾಗು ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಸಿಸಿಬಿ ಪೊಲೀಸರು ಅಂತರಾಷ್ಟ್ರೀಯ ಪೆಡ್ಲರ್ಗಳನ್ನು ಬಂಧಿಸಿ 1,52,50,000 ರೂಪಾಯಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಜಾರ್ಖಂಡ್ ಮತ್ತು ಕೇರಳ ಮೂಲ ಹಾಗೂ ಕರ್ನಾಟಕ ರಾಜ್ಯದ ಆರೋಪಿಗಳಾದ ಹೃತಿಕ್ ರಾಜ್ ಅಭಿಷೇಕ್ ಗೌತಮ್ ಮತ್ತು ಆರ್ ಬಸ್ ಇವರುಗಳನ್ನು ಬಂಧಿಸಿ 92 ಗ್ರಾಂ ತೂಕದ 29 ಪಿಲ್ಸ್ 500 ಗ್ರಾಂ ಎಂಡಿ ಕ್ರಿಸ್ಟಲ್ 130 ಗ್ರಾಂ ಚರಣ್ ನೂರು ಗ್ರಾಂ ಫಕಿಂಗ್ ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವ ಯಶಸ್ವಿಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಸಿಸಿಬಿ ಪೊಲೀಸರು ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಗಳನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿ ಹಾಗೂ ಮೂರು ಕೋಟಿ ಮೌಲ್ಯದ ಈ ಸಿಗರೇಟ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.ಶೋಯಬ್ ಕೇರಳ ಮೂಲದ ಆಸಾಮಿಯನ್ನು ಸುದ್ಗುಂಟೆ ಪೊಲೀಸ್ ಠಾಣ ಸಹ ದಿನ ನೀವು ಗುರಪ್ಪನ ಪಾಳ್ಯದಲ್ಲಿ ಮನೆಯೊಂದರಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದನೆಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.