ಬೆಂಗಳೂರು: ಮುಂಬೈ ಸೈಬರ್ ಪೊಲೀಸರ ಸೋಗಿನಲ್ಲಿ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ಗೆ ದುಷ್ಕರ್ಮಿಗಳು ಕರೆ ಮಾಡಿ ಹೆದರಿಸಿ 3.46 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಸಂಬಂಧ ವೈಟ್ಫಿಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೈಟ್ಫಿಲ್ಡ್ನ ಬಿಇಎಂಎಲ್ ಲೇಔಟ್ನ ಮೇಘನಾ ದುಬೆ(25) ಸೈಬರ್ವಂಚಕರ ಬಲೆಗೆ ಬಿದ್ದು ಹಣ ಕಳೆದು ಕೊಂಡು ಪೊಲೀಸ್ ಮೊರೆ ಹೋಗಿದ್ದರು. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಮೇಘನಾ ದುಬೆಗೆ ನ.28ರಂದು ಬೆಳಗ್ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ್ದ ವ್ಯಕ್ತಿ ತಾನು ಮುಂಬೈ ಸೈಬರ್ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾನೆ.
ಬಳಿಕ ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್ಗೆ ಇಂಟರ್ ನ್ಯಾಷನಲ್ ಎಂಡಿಎಂಎ ಡ್ರಗ್ಸ್ ಡೆಲಿವರಿಗೆ ಬಂದಿದೆ. ಇದನ್ನು ಮುಂಬೈನ ಫೆಡೆಕ್ಸ್ ಕೊರಿಯರ್ ಏಜೆನ್ಸಿಯಲ್ಲಿ ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎಂದು ಹೇಳಿದ್ದಾನೆ. ಇದರಿಂದ ಭಯಗೊಂಡ ಮೇಘನಾ, ನನಗೂ ಆ ಪಾರ್ಸೆಲ್ಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ದುಷ್ಕರ್ಮಿಗಳು ಸ್ಕೈಪ್ ಆ್ಯಪ್ ಮುಖಾಂತರ ಸೈಬರ್ ದೂರು ನೀಡುವಂತೆ ಹೇಳಿದ್ದಾರೆ. ಅದರಂತೆ ಮೇಘನಾ ಸ್ಕೈಪ್ ಆ್ಯಪ್ ಇನ್ಸ್ಸ್ಟಾಲ್ ಮಾಡಿಕೊಂಡಿದ್ದಾರೆ. ಬಳಿಕ ದುಷ್ಕರ್ಮಿಗಳು, ತನಿಖೆಗಾಗಿ ಆರ್ಬಿಐ ವೆರಿಫಿಕೇಶನ್ಗಾಗಿ ಹಣ ಹಾಕಬೇಕು. ಪರಿಶೀಲನೆ ಬಳಿಕ ಆ ಹಣವನ್ನು ವಾಪಾಸ್ ನೀಡುವುದಾಗಿ ಹೇಳಿದ್ದಾರೆ. ದುಷ್ಕರ್ಮಿಗಳ ಮಾತು ನಂಬಿದ ಮೇಘನಾ, ದುಷ್ಕರ್ಮಿಗಳು ನೀಡಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು 3.46 ಲಕ್ಷ ವರ್ಗಾಯಿಸಿದ್ದಾರೆ.
ಬಳಿಕ ದುಷ್ಕರ್ಮಿಗಳು ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಬಳಿಕ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಮೇಘನಾಗೆ ಅರಿವಾಗಿದೆ. ನಂತರ ಅವರು ವೈಟ್ಫಿಲ್ಡ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.