ಚಳ್ಳಕೆರೆ: ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿ ಹಟ್ಟಿಯ ಲಂಬಾಣಿ ಸಮಾಜದ ಶ್ರೀ ಶ್ರೀ ನಂದಾಮಸಂದ್ ಬಾಬಾಜಿ ಪರಂಪರೆಯ ಸೇವಾಶ್ರಮದ ದಿ.ಶ್ರೀ ಶ್ರೀ ಶ್ರೀ ಶಿವ ಸಾಧು ಸ್ವಾಮಿಗಳ 5 -12 -2023 ರಂದು ವೈಕುಂಠ ಸಮಾರಾಧನೆ ಪ್ರಯುಕ್ತ ಕಣ್ಣಿನ ತಪಾಸಣೆ ಶಿಬಿರವನ್ನು ಶಿವಮೊಗ್ಗ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸೇವಾಶ್ರಮದ ಉತ್ತರ ಅಧಿಕಾರಿಯಾದ ಶ್ರೀ ಪುರುಷೋತ್ತಮ ರವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮೃತ ಸ್ವಾಮೀಜಿಗಳ ಉತ್ತರಾಧಿಕಾರಿಯಾದ ಪುರುಷೋತ್ತಮ್ ಅವರು ಉಚಿತ ಕಣ್ಣಿನ ತಾಪ ಸರಣಿಯ ಕಾರ್ಯಕ್ರಮದ ಬಗ್ಗೆ ಮಾತನಾಡಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಗ್ರಾಮಮದಲ್ಲಿ ಇರುವ ಲಂಬಾಣಿ ಸಮಾಜದ ಸ್ವಾಮೀಜಿಗಳಾದ ಶ್ರೀ ಶಿವಸಾದು ಸ್ವಾಮಿಗಳು ಇತ್ತೀಚೆಗೆ ಅನಾರೋಗ್ಯದಿಂದ ಮುತರಾಗಿದ್ದರು.
ಅವರ ವೈಕುಂಠ ಸಮಾರಾಧನೆ ದಿನದಂದು ಜ್ಞಾಪಕರ್ತವಾಗಿ. ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಮೃತ ಸ್ವಾಮೀಜಿಗಳ ಕುರುಡಿಹಳ್ಳಿ ಲಂಬಾಣಿಹಟ್ಟಿ ಸೇವಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಉಚಿತ ಕಣ್ಣಿನ ತಪಾಸಣೆಯನ್ನು ಸಾರ್ವ ಜನಿಕರು ಸ್ವದುಪಯೋಗ ಪಡಿಸಿ ಕೊಳ್ಳಬೇಕೆಂದು ಕೋರಿದರು. ಇನ್ನು ಮುಂದೆ ಸ್ವಾಮಿಜಿಗಳ ಸೇವಾ ಕಾರ್ಯಕ್ರಮ ಗಳಾದ. ಗೋಶಾಲೆಯ ನಿರ್ವಹಣೆ ಹಾಗೂ ಸೇವಾಶ್ರಮದಲ್ಲಿ ನಿತ್ಯ ಅನ್ನ ಸಂತರ್ಪಣೆ ಸೇವೆ ಮುಂದುವರೆಯುವುದು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಮಕ್ಕಳ ತಜ್ಞ ಡಾ.ಚಂದ್ರನಾಯ್ಕ್,ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್,ಕ್ರಾಂತಿಕುಮಾರ್, ವೀರಭದ್ರನಾಯ್ಕ್, ಶಂಕರ್ ನಾಯ್ಕ್ ಇತರರು ಉಪಸ್ಥಿತರಿದ್ದರು.ಉಚಿತ ಕಣ್ಣಿನ ತಪಾಸಣೆ ಶಿಬಿರಕ್ಕೆ ಬರುವ ರೋಗಿಗಳು.ದಿನಾಂಕ 05-12-2023 ಮಂಗಳವಾರ ಸ್ಥಳ: ಕುರುಡಿ ಹಳ್ಳಿ ಲಂಬಾಣಿ ಹಟ್ಟಿ ಸೇವಾಶ್ರಮ ಸಮಯ11ಗಂಟೆಗೆ ಇತ್ತೀಚಿನ ಎರಡು ಭಾವಚಿತ್ರ, ಆಧಾರ್ ಕಾರ್ಡ್ರೇಷನ್ ಕಾರ್ಡ್, ಎರಡು ಪ್ರತಿ ಜೆರಾಕ್ಸ್ ಕಡ್ಡಾಯವಾಗಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಕುಮಾರ್ ನಾಯ್ಕ್,ಮೊ.ಸಂಖ್ಯೆ:9845131687 ಪುರುಷೋತ್ತಮ್ ನಾಯ್ಕ್ ಮೊ.ಸಂಖ್ಯೆ: 9108121494, ಹೇಮಂತ್ ನಾಯ್ಕ್ ಮೊ. ಸಂಖ್ಯೆ:9538500862