ಬೆಂಗಳೂರು: ಮಕ್ಕಳ ದಿನಾಚರಣೆಯ ಅಂಗವಾಗಿ, ವಾಸನ್ ಐ ಕೇರ್ ಆಸ್ಪತ್ರೆಯ ಬೊಮ್ಮನಹಳ್ಳಿ ಶಾಖೆ, ನ. ೧ರಿಂದ ನ.೩೦ರವರೆಗೆ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ನೇತ್ರ ತಪಾಸಣೆ (ಈಡಿee ಔPಆ) ಕಾರ್ಯಕ್ರಮವನ್ನು ಘೋಷಿಸಿದೆ. ಈ ಕಾರ್ಯಕ್ರಮದ ಉದ್ದೇಶ ಮಕ್ಕಳಲ್ಲಿ ದೃಷ್ಟಿ ಸಮಸ್ಯೆಗಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ಪೋಷಕರಲ್ಲಿ ಸಮಯೋಚಿತ ದೃಷ್ಟಿ ಆರೈಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಕಾರ್ಯಕ್ರಮವನ್ನು ಘೋಷಿಸಿದ ಸಂದರ್ಭದಲ್ಲಿ ಮಾತನಾಡಿದ ಡಾ. ನಿಶಾಂತ್ ಅವರು, “ಮಕ್ಕಳ ದೃಷ್ಟಿ ಸಮಸ್ಯೆಗಳ ಸಮಯೋಚಿತ ಪತ್ತೆ, ಅವರ ವಿದ್ಯಾಭ್ಯಾಸದ ಸಾಧನೆ ಮತ್ತು ಒಟ್ಟಾರೆ ಬೆಳವಣಿಗೆಗೆ ಮಹತ್ವದ್ದಾಗಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬ ಮಕ್ಕಳಿಗೂ ಸರಿಯಾದ ಸಮಯದಲ್ಲಿ ಸರಿಯಾದ ಆರೈಕೆ ದೊರಕುವುದು ನಮ್ಮ ಉದ್ದೇಶ.’’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ವೀಣಾ ಪ್ರಭು, ಮಕ್ಕಳ ನೇತ್ರ ತಜ್ಞರು (Pಚಿeಜiಚಿಣಡಿiಛಿ ಔಠಿhಣhಚಿಟmoಟogisಣ) ಅವರು ಮಾತನಾಡಿ, “ಬಾಲ್ಯದಲ್ಲಿಯೇ ದೃಷ್ಟಿ ಸಮಸ್ಯೆಗಳನ್ನು ಪತ್ತೆಮಾಡುವುದು ಅತ್ಯಂತ ಮುಖ್ಯ. ಸರಳ ನೇತ್ರ ಪರೀಕ್ಷೆಯೊಂದೇ ಭವಿಷ್ಯದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಲ್ಲದು.’’ ಎಂದರು. ಡಾ. ಮಹೇಕ್ ಭಂಡಾರಿ ಅವರು ಮಾತನಾಡಿ, “ಮಕ್ಕಳ ಆರೋಗ್ಯ ತಪಾಸಣೆಯ ಭಾಗವಾಗಿ ಪೋಷಕರು ದೃಷ್ಟಿ ಪರೀಕ್ಷೆಯನ್ನು ಸಹ ತಪ್ಪದೆ ಸೇರಿಸಬೇಕು.’’ ಎಂದು ತಿಳಿಸಿದರು. ಡಾ. ವರ್ಷ ಅವರು, “ಮಕ್ಕಳು ಸ್ವತಃ ದೃಷ್ಟಿ ಸಮಸ್ಯೆಯನ್ನು ಗಮನಿಸದೇ ಇರಬಹುದು. ಆದ್ದರಿಂದ ಪೋಷಕರು ಪ್ರೊಆಕ್ಟಿವ್ ಆಗಿ ದೃಷ್ಟಿ ತಪಾಸಣೆ ಮಾಡಿಸುವುದು ಅವಶ್ಯ.’’ ಎಂದರು.



