ಚಳ್ಳಕೆರೆ: ಕುರುಡಿ ಹಳ್ಳಿ ಲಂಬಾಣಿ ಹಟ್ಟಿಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ 300 ಕ್ಕೂ ಹೆಚ್ಚು ಕಣ್ಣಿನ ದೋಷವುಳ್ಳ ರೋಗಿಗಳು ಭಾಗವಹಿಸಿ. ಕಣ್ಣಿನ ತಪಾಸಣೆ ಮಾಡಿಸಿ ಕೊಂಡರು. 25ಕ್ಕು ಹೆಚ್ಚು ರೋಗಿಗಳು ಶಸ್ತ್ರ ಚಿಕಿತ್ಸೆಗೆ ಅಯ್ಕೆಯಾದರು ಎಂದು ದಿ.ಶ್ರೀ ಶಿವಸಾಧು ಮಹಾರಾಜ್ ರವರ ಪುತ್ರ ಪುರುಷೋತ್ತಮ್ ನಾಯ್ಕ್ ಹೇಳಿದರು.
ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿಯ ಬಾವಾಜಿ ಆಶ್ರಮದಲ್ಲಿ ಶಿವಸಾಧು ಮಹರಾಜ್ ಅವರ ವೈಕುಂಠ ಸಮಾರಂಭದ ಹಿನ್ನೆಲೆಯಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಣ್ಣಿನ ತಪಾಸಣೆ ಶಿಬಿರ ಕುರಿತು ಅವರು ಮಾತನಾಡಿ. ಶ್ರೀ ಶಿವಸಾಧು ಸ್ವಾಮಿಗಳು ಅನೇಕ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿಗಳನ್ನು ಬಡವರಿಗೆ ಉಚಿತವಾಗಿ ನೀಡುತಿದ್ದರು.
ಭಾರತೀಯ ಗೋವು ಸಂತತಿ ಉಳಿವಿಗಾಗಿ ಗೋಶಾಲೆ ಪ್ರಾರಂಭಿಸಿ. ಅವುಗಳ ಪಾಲನೆ ಪೋಷಣೆ ಮಾಡಿತ್ತಿದ್ದರು. ಆಶ್ರಮಕ್ಕೆ ಬರುವ ಭಕ್ತರಿಗೆ ನಿತ್ಯ ಅನ್ನ ಸಂತರ್ಪಣೆ ದಾಸೋಹ ಮಾಡುತ್ತಿದ್ದರು. ಬಂಜಾರ ಸಮುದಾಯದ ಸದಾಶಿವ ಆಯೋಗದ ಮೀಸಲಾತಿ ಹೋರಟದಲ್ಲಿ ಸಮಾಜವನ್ನುಸಂಘಟನೆ ಮಾಡಿದ್ದರು.
ಇವರು ಆಧ್ಯಾತ್ಮಿಕ ಜಾಗೃತಿಯನ್ನು ಜನರಲ್ಲಿ ಮೂಡಿ ಸುತ್ತಿದ್ದರು. ಅವರು ಬಿಟ್ಟುಹೋದ ಚಿಂತನೆಗಳನ್ನು ಅಳವಡಿಸಿಕೊಂಡು. ಅವರು ಮಾಡಿದ ಸೇವೆಯನ್ನು ಮಕ್ಕಳು ಮುಂದುವರಿಸಿಕೊಂಡು ಹೋಗುತ್ತೇವೆ. ಅದರಂತೆ ಜನರ ಆರೋಗ್ಯಕ್ಕಾಗಿ ಅವರ ವೈಕುಂಠ ದಿನದಂದು ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನೇತ್ರ ತಪಾಸಣೆ ಸಿಬಿರದಲ್ಲಿ ನೂರಾರು ಜನರು ಭಾಗವಹಿಸಿ. ಶಿಬಿರದ ಉಪಯೋಗ ಪಡೆದರು.ಈ ಶಿಬಿರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಮಂಜುನಾಥ್, ಶಿವರಾಮ್ ಹಾಗೂ ಭಗತ್ ಸ್ವಾಮೀಜಿ ರಾಜು ವಿದ್ಯಾ ಯೋಗಾಶ್ರಮದ ಪರಮಪೂಜ್ಯ ಶ್ರೀ ವಾಸುದೇವ ನಂದ ಸರಸ್ವತಿ ಸ್ವಾಮೀಜಿ. ದೂಪದಳ್ಳಿ ಶಕ್ತಿಪೀಠ ಶ್ರೀ ಶಿವಪ್ರಕಾಶ್ ಮಹಾರಾಜ್, ಮಕ್ಕಳ ತಜ್ಞ ಡಾ.ಚಂದ್ರನಾಯ್ಕ್ ಸೇರಿದಂತೆ ಲಂಬಾಣಿ ಸಮುದಾಯದ ಇತರ ಮುಖಂಡರು ಭಾಗವಹಿಸಿದ್ದರು.