ಚಂದಾಪುರ: ದೇಶ ಕಾಯುವ ಸೈನಿಕರ ಕುಟುಂಬಗಳಿಗೆ ಉಚಿತ ಊಟ ನೂತನ ಸಾಮಾಜಿಕ ಸೇವಾ ವಿಧಾನ ಮಾದರಿಯಾಗಿದೆ ಎಂಬುದಾಗಿ ನೂತನ ಡಿವೈಎಸ್ ಪಿ ಎಲ್.ವೈ.ರಾಜೇಶ್ ಶ್ಲಾಘನೆ ವ್ಯಕ್ತಪಡಿಸಿದರು.ಅವರು ಹೆಬ್ಬಗೋಡಿ ನಗರ ಸಭೆಯ ವ್ಯಾಪ್ತಿಯ ಅನಂತ ನಗರದಲ್ಲಿ ನೂತನವಾಗಿ ಆರಂಭವಾಗಿರುವ ಹಂಗರ್ ಕ್ಯಾಂಪ್ ಕಫೆ ಉದ್ಘಾಟನೆ, ಮಾಡಿ ಮಾತನಾಡಿದರು.
ಇಂದಿನ ಆಧುನಿಕತೆಯ ವ್ಯವಹಾರಿಕ ಜೀವನದಲ್ಲಿ ಎಲ್ಲರ ಒಂದಲ್ಲ ಒಂದು ರೀತಿ ಲಾಭ ಹಾಗೂ ಸ್ವಾರ್ಥ ದೃಷ್ಟಿಯಿಂದ ವ್ಯಾಪಾರ ಮಾಡುವುದು ಸಾಮಾನ್ಯ ಆದರೆ ಹಂಗರ್ ಕ್ಯಾಂಪ್ ಕಫೆ ನ ಮಾಲೀಕರಾದ ಹೇಮ ನಿರಂಜನ್, ಮತ್ತು ಚೇತನ್ ಪಾಟೀಲ್ ಅವರ ಸಾರಥ್ಯದಲ್ಲಿ ಯಾವುದೇ ಸ್ವಾರ್ಥದ ಲಾಭದ ಆಸೆ ಇಲ್ಲದೇ ಸಾಮಾಜಿ ಸೇವಾ ಮನೋಭಾವ ಹಾಗೂ ವ್ಯಾಪಾರದಲ್ಲಿ ತತ್ವ ಸಿದ್ದಾಂತಗಳನ್ನು ಇಟ್ಟು ಕೊಂಡು ನಮ್ಮ ದೇಶದ ರಕ್ಷಣೆ ಮಾಡುವ ಯೋಧರ ಕುಟುಂಬಗಳಿಗೆ ಪ್ರತಿನಿತ್ಯವೂ ಉಚಿತ ಊಟದ ವ್ಯವಸ್ಥೆಯನ್ನು ಮಾಡುವಂತಹ ಸಂಕಲ್ಪವು ನಿಜಕ್ಕೂ ಇದು ಇಡೀ ದೇಶದಲ್ಲಿ ಮಾದರಿಯಾದ ಸೇವಾ ಕಾರ್ಯದ ಮೈಲುಗಲ್ಲಾಗಿದೆ ಇಂತಹ ಸೇವಾ ಕಾರ್ಯದಲ್ಲಿ ಮೊದಲನೆ ಹಂತದಲ್ಲಿ ಜೆ.ಪಿ.ನಗರದಲ್ಲಿ ಆರಂಭಮಾಡಿ ಜನಮನ್ನಣೆ ಗಳಿಸಿ ಯಶಸ್ಸು ಆಗಿದ್ದಾರೆ ಈ ನಮ್ಮ ಆನೇಕಲ್ ಭಾಗದಲ್ಲಿ ಈ ನೂತನ ಶಾಖೆಯ ಬಹಳ ಯಶಸ್ಸು ಸಾಧಿಸಲಿ ಎಂಬುದಾಗಿ ಶುಭ ಆರೈಸಿದರು.
ಹಂಗರ್ ಕ್ಯಾಂಪ್ ಕಫೆ ನ ಮಾಲೀಕರಾದ ಹೇಮ ನಿರಂಜನ್ ಮಾತನಾಡಿ ನಾವೆಲ್ಲರೂ ರಾತ್ರಿಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದವಿ ಹಾಗೂ ದೇಶದೊಳಗೆ ಸುಖ ಶಾಂತಿಯಿಂದ ಬದುಕುತ್ತಿದ್ದಿವಿ ಎಂದರೆ ಅದಕ್ಕೆ ಕಾರಣ ನಮ್ಮ ಯೋಧರ ತ್ಯಾಗ ಬಲಿದಾನ ಫಲ ಇದಕ್ಕೆ ನಾವುಗಳು ಋಣ ತೀರಿಸಲು ಕಿಂಚಿತ್ತು ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಯೋಧರ ಬಗ್ಗೆ ಯುವಜನರು ಪ್ರೇರಣೆ ಪಡೆದು ಮನೆಗೊಬ್ಬ ಯೋಧರು ಬರಲಿ ತಾಯಿ ನಾಡ ರಕ್ಷಣೆಗಾಗಿ ನಿಲ್ಲಲಿ ಹಾಗೂ ಯೋಧರ ರಕ್ಷಣೆಗಾಗಿ ನಾವು ಇದ್ದಿವಿ ಎಂಬ ಸಂದೇಶಗಳನ್ನು ಈ ಸಮಾಜಕ್ಕೆ ನೀಡಲು ಈ ಕ್ಯಾಂಪ್ ತೆರೆಯಲಾಗಿದೆ ಎಂದರು.
ಈಕ್ಯಾಂಪ್ ಕಫೆಯ ಒಳಗೆ ಕಾಲಿಟ್ಟ ಗ್ರಹಕರಿಗೆ ನಾವು ಗಡಿಯಲ್ಲಿ ಇರುವ ಯಾವುದೋ ಮಿಲಿಟರಿ ಕ್ಯಾಂಪ್ ಗೆ ಬಂದಂತೆ ಭಾಸವಾಗಬೇಕು ಆ ರೀತಿಯಲ್ಲಿ ಸುತ್ತ ಮುತ್ತಲಿನ ಚಿತ್ರಗಳು,ಪೋಸ್ಟರ್, ಬಣ್ಣದ ಗೋಡೆಗಳು, ಗನ್ ಗಳ ಚಿತ್ರ, ಯೋಧರ ಚಿತ್ರ ,ಐ ಲವ್ ಯೂ ಆರ್ಮಿ ಅನ್ನುವ ದೊಡ್ಡ ಎಲ್ ಇಟಿ ಲೈಟಿಂಗ್ ಲೆಟರ್ ಗಳು ಗ್ರಾಹಕರಿಗೆ ಸ್ಪೂರ್ತಿ ತುಂಬಿ, ಅವರು ಹೊಟ್ಟೆ ತುಂಬ ಊಟಮಾಡಿ ಸಂತೃಪ್ತರಾಗಿ ಮತ್ತೆ ಮತ್ತೆ ತಮ್ಮ ಕುಟುಂದವರ ಜೊತೆಯಲ್ಲಿ ಬಂದು ಇಲ್ಲಿ ಖಾದ್ಯಗಳನ್ನು ಸವಿದು ಆನಂದಿಸಬೇಕು ಎಂಬ ಮಹತ್ವದ ಉದ್ದೇಶವಾಗಿದೆ ಎಂದರು.
ನೂತನ ಡಿವೈಎಸ್ ಪಿ ಎಲ್.ವೈ.ರಾಜೇಶ್ ಗೆ ಅಭಿನಂದನೆ: ತಮ್ಮ ಕಾರ್ಯ ದಕ್ಷತೆ ಹಾಗೂ ಕರ್ತವ್ಯ ಪಾಲನೆಯಲ್ಲಿ ಉತ್ತಮ ಹೆಸರು ಗಳಿಸಿ ,ಜನರ ಪ್ರೀತಿಗೆ ಪಾತ್ರರಾದ ಎಲ್.ವೈ.ರಾಜೇಶ್ ಅವರ ಸೇವಾ ಕಾರ್ಯವನ್ನು ಗುರುತಿಸಿ ಡಿವೈಎಸ್ ಪಿ ಆಗಿ ಬಡ್ತಿ ನೀಡಿದೆ ,ಇದು ಅವರ ಅಪಾರ ಅಭಿನಾನಿ ಬಳಕ್ಕೆ ಮತ್ತು ರಾಜ ಲಾಂಛನ ಸಂಸ್ಥೆಯ ಸದಸ್ಯರುಗಳಿಗೆ ಸಂತೋಷ ಉಂಟುಮಾಡಿದೆ,ಇದೇ ಸಂದರ್ಭದಲ್ಲಿ ಈಸಂತೋಷ ಸಂಭ್ರಮವನ್ನು ರಾಜೇಶ್ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ತಮ್ಮ ಅಭಿಮಾನವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ರಾಜಲಾಂಛನ ಕೇಂದ್ರ ಘಟಕದ ಉಪಾಧ್ಯಕ್ಷರಾದ ಡಾ.ವಿಜಯರಾಘವ ರೆಡ್ಡಿ, ಚಂದಾಪುರ ಘಟಕದ ಅಧ್ಯಕ್ಷರಾದ ವಸಂತ್ ಕುಮಾರ್, ಉಪಾಧ್ಯಕ್ಷ ಹೆಚ್.ಎ.ಶೇಖರ್,ಕಾರ್ಯದರ್ಶಿ ಭಾರತಿ, ಸದಸ್ಯರಾದ ಕನ್ನಡಿಗ ಓಂಕಾರಪ್ಪ, ರಘುನಾಥ್, ಶ್ರೀನಿವಾಸ್, ಸರ್ಜಾಪುರ ರಾಘವೇಂದ್ರ, ಶಿವಾನಂದ ಸಿದ್ದಪ್ಪ, ಹಡವದಪ್ಪ, ವಿದ್ಯಾ, ಶೀತರ್ ಇನ್ನೂ ಮುಂತಾದವರು ಹಾಜರಿದ್ದರು.