ಬೇಲೂರು: ಬೇಲೂರು ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ನೆಹರುನಗರ ಭಾರತ್ ಪೆಟ್ರೋಲ್ ಬಂಕ್ ಬಳಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ಕ್ಲಬ್ ಅಧ್ಯಕ್ಷ ವೈ.ಬಿ.ಸುರೇಶಗೌಡ ಮತ್ತು ಲಯನ್ಸ್ ಕ್ಯಾಬಿನೆಟ್ ಸದಸ್ಯ ಡಾ.ಚಂದ್ರಮೌಳಿ ನೇತೃತ್ವದಲ್ಲಿ ರಕ್ತದೊತ್ತಡ, ಮಧುಮೇಹ ಇನ್ನಿತರ ರೋಗಗಳ ಪತ್ತೆ ಹಚ್ಚುವುದು, ತಪಾಸಣೆ ಮತ್ತು ಆರೋಗ್ಯ ಜಾಗೃತಿ ಅಭಿಯಾನವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾವೇರಿ ಕ್ಲಿನಿಕ್ ಹಿರಿಯ ವೈದ್ಯರು ಮತ್ತು ಲಯನ್ಸ್ ಕ್ಲಬ್ ಕ್ಯಾಬಿನೆಟ್ ಸದಸ್ಯ ಡಾ.ಚಂದ್ರಮೌಳಿ,ಅಧಿಕ ರಕ್ತದೊತ್ತಡವು ಇಂದು ಅತೀ ಸಾಮಾನ್ಯವಾದ ಒಂದು ಆರೋಗ್ಯ ಸಮಸ್ಯೆಯಾಗಿದ್ದು, ಯುವ ವಯಸ್ಸಿನ ವರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ.
ಅವರಲ್ಲಿಅನೇಕರು ಔಷಧ ಚಿಕಿತ್ಸೆ ಆರಂಭಿಸಲು ಹಿಂಜರಿಯುತ್ತಿದ್ದಾರೆ.ಇದ್ದರಿಂದ ಹತ್ತಾರು ಕಾಯಿಲೆಗಳಿಗೆ ಒಳ ಪಡುವ ಕಾರಣದಿಂದ ವೈದ್ಯರ ಸಲಹೆ ಸೂಚನೆ ಜೊತೆಗೆ ನಿಯಮಿತ ವ್ಯಾಯಾಮ ಹಾಗೂ ಮಾತ್ರೆಗಳನ್ನು ಸೇವಿಸಬೇಕು ಆಗ ಮಾತ್ರ ಸದೃಡ ಆರೋಗ್ಯ ಪಡೆಯಲು ಸಾಧ್ಯ ಎಂದರು.
ರಕ್ತದಲ್ಲಿ ಹೆಚ್ಚು ಸಕ್ಕರೆಯಿರುವುದು ಮೂತ್ರಪಿಂಡಗಳ ಮೇಲೆ ಕಠಿಣವಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒತ್ತಡದ ಬದುಕಿನಲ್ಲಿ ಜನರು ತಮ್ಮ ಜೀವನವನ್ನು ಸಾಗಿಸುತ್ತಿದ್ದು ಹತ್ತು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಅದರಲ್ಲೂ ಸಹ ಪ್ರಮುಖವಾಗಿ ಮಧುಮೇಹ ಹಾಗೂ ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಹೆಚ್ಚು ಯುವಕರಲ್ಲಿ ಇಂತಹ ಒಂದು ಕಾಯಿಲೆಗಳು ಕಂಡುಬರುತ್ತದೆ ಅಲ್ಲದೆ ಪ್ರತಿಯೊಬ್ಬರೂ ಸಹ ಮಧುಮೇಹ ಹಾಗೂ ಸಕ್ಕರೆ ಕಾಯಿಲೆಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ಗಮನ ಹರಿಸುವ ಮೂಲಕ ತಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ಪ್ರತಿಯೊಬ್ಬ ನಾಗರಿಕರಿಗೂ ಸಹ ಆರೋಗ್ಯದ ಮಹತ್ವವನ್ನು ಶಿಬಿರಗಳ ಮೂಲಕ ಆಯೋಜಿಸುತ್ತಿದೆ ಲಯನ್ಸ್ ಕ್ಲಬ್ ಇತ್ತೀಚಿನ ದಿನದಲ್ಲಿ , ಶಿಕ್ಷಣ, ಪರಿಸರ ಸೇರಿದಂತೆ ಹತ್ತಾರು ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಲಯನ್ಸ್ ಪ್ರತಿ ಸದಸ್ಯರು ತಮ್ಮ ದುಡಿಮೆ ಒಂದು ಭಾಗವನ್ನು ಸಮಾಜಕ್ಕೆ ಅರ್ಪಣೆ ಮಾಡುವ ಮೂಲಕ ಔದಾರ್ಯತೆ ಮರೆದಿದ್ದಾರೆ.
ಇಂದು ಪುರಸಭಾ 2 ನೇ ವಾರ್ಡ್ ನಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು ನಿಜಕ್ಕೂ ಸಂತೋಷ ತಂದಿದೆ ಹಾಗೆ ಮುಂದಿನ ದಿನಗಳಲ್ಲಿ ನಮ್ಮ ಎರಡನೇ ವಾರ್ಡಿನಲ್ಲಿ ಬಹಳಷ್ಟು ಜನ ಕೂಲಿ ಕಾರ್ಮಿಕರು ಇರುವುದರಿಂದ ಇಲ್ಲಿ ಒಂದು ಬೃಹತ್ ಮಟ್ಟದ ಆರೋಗ್ಯ ತಪಾಸಣಾ ಶಿಬಿರವನ್ನು ಆಯಸಿದರೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಬೇಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ.ಸುರೇಶಗೌಡ ಮಾತನಾಡಿ, ಸೇವಾ ಕ್ಷೇತ್ರದಲ್ಲಿ ಅಗ್ರ ಮಾನ್ಯ ಸ್ಥಾನ ಪಡೆದ ಲಯನ್ಸ್ ಕ್ಲಬ್ ವಿಶ್ವ 220 ರಾಷ್ಟ್ರದಲ್ಲಿ ಲಕ್ಷಾಂತರ ಸದಸ್ಯರನ್ನು ಒಳಗೊಂಡಿದೆ. ಬೇಲೂರಿನಲ್ಲಿ ಕಳೆದ ಒಂದು ದಶಕಕ್ಕಿಂತ ಹೆಚ್ಚು ಸೇವೆಯನ್ನು ಮಾಡುತ್ತಾ ಬಂದಿದೆ. ವಿಶೇಷವಾಗಿ ಗ್ರಾಮೀಣರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಆರೋಗ್ಯ ಶಿಬಿರ ನಡೆಸಲು ಮುಂದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಲಯನ್ಸ್ ಮಾಜಿ ಅಧ್ಯಕ್ಷರಾದ ಎಂ.ಪಿ.ಪೂವಯ್ಯ, ಅಬ್ದುಲ್ ಲತೀಪ್, ಸುರೇಶ್ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ,ಪದಾಧಿಕಾರಿಗಳಾದ ಮುಕ್ತಿಯಾರ್ ಅಹಮದ್, ನೌಷದ್ , ಸಂತೋಷ, ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.