ಅರಸೀಕೆರೆ: ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಮತ್ತು ರಾಜೀವ್ ಆರ್ಯವೇಧ ಆಸ್ಪತ್ರೆ ಸಂಯುತ್ತಾ ಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರದ ಅಡಿಯಲ್ಲಿ ಗ್ರಾಮಸ್ಥರ ಮಧುಮೇಹ ಹಾಗು ಬೀಪಿಯ ಪರೀಕ್ಷೆ ಹಾಗು ಇನ್ನಿತರ ತೊಂದರೆಗಳಾದ ಜ್ವರ, ಶೀತ, ಮಂಡಿ ಹಾಗು ಕಾಲು ನೋವು, ಮತ್ತು ಇನ್ನಿತರ ಗಾಯಗಳಿಗೆ ತಪಾಸಣಿ ನಡೆಸಿ ಔಷಧಿಯನ್ನು ಬರೆದು ಕೊಟ್ಟರು. ಅಂತಿಮ ವರ್ಷದ ಕೃಷಿ ಹಾಗು ಆಹಾರ ತಂತ್ರಜ್ಞಾನದ RAWEP ವಿದ್ಯಾರ್ಥಿಗಳು ಈ ಶಿಬಿರಕ್ಕೆ ಬೇಕಾದ ತಯಾರಿ ನಡೆಸಿ ಹಾಗು ಇತರ ನಿರ್ವಹಣ ಕಾರ್ಯವನ್ನು ನಡೆಸಿದರು.
ಈ ಶಿಬಿರಕ್ಕೆ ಗ್ರಾಮದ ಸುಮಾರು 74 ಗ್ರಾಮಸ್ಥರು ಆಗಮಿಸಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಶಂಕರ ಎಂ.ಎಚ್, ಸಂಯೋಜಕರು ಹಾಗು ಸಹ ಸಂಯೋಜಕರಾದ ಡಾ. ವಾಘಮಾರೆ ವಿಜಯ ಕುಮಾರ್ ವೀರಪ್ಪ, ಡಾ. ನವೀನ್ ಕುಮಾರ್ ಪಿ , ಡಾ. ಶಶಿಕಿರಣ್ . ಎ.ಎಸ್ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ, ಹಾಗೂ ರಾಜೀವ ಆಯರ್ವೇಧ ಕಾಲೇಜಿನ ವತಿಯಿಂದ ಡಾ. ಉದಯ ಗಣೇಶ ಜಿ ,ಡಾ. ನಿಂಜಿದ್ ಆರ್ ಹಾಗು ಡಾ. ದೀಪಶ್ರೀ .ಎಚ್.ಪಿ ಇವರು ಆಗಮಿಸಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.