ಬೆಂಗಳೂರು: ನಾಯಕ್ಸ್ – ಸ್ಪೀಚ್ ಅಂಡ್ ಹಿಯರಿಂಗ್ ಕ್ಲಿನಿಕ್, ಎನ್ರಿಚ್ ರಿಹ್ಯಾಬಿಲಿಟೇಶನ್ ಟ್ರಸ್ಟ್ ಸಹಭಾಗಿತ್ವದಲ್ಲಿ, ವಿಶ್ವ ಶ್ರವಣ ದಿನದಂದು ಮಕ್ಕಳಿಗಾಗಿ ಉಚಿತ ಶ್ರವಣ ತಪಾಸಣೆ ಕೇಂದ್ರವನ್ನು ತೆರೆಯುತ್ತಿದೆ.
ಮಾಧ್ಯಮ ಗೋಷ್ಠಿಯಲ್ಲಿ ನಿರ್ದೇಶಕರಾದ ಎಂ ಎಸ್ ಜೆ ನಾಯಕ್ ಪತ್ರಿಕಾ ಮಾಧ್ಯಮದವರನ್ನು ಉದ್ದೇಶಿಸಿ ಶ್ರವಣ ದೋಷದಲ್ಲಿ ಜಾಗತಿಕ ಹೆಚ್ಚಳವನ್ನು ವಿವರಿಸಿದರು. ಇದು 1.5 ಶತಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು 2050 ರ ವೇಳೆಗೆ 2.5 ಶತಕೋಟಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ 4 ಮಿಲಿಯನ್ ವ್ಯಕ್ತಿಗಳಿಗೆ ಶ್ರಾವಣ ದೋಷವಿದೆ 0-6 ವರ್ಷ ವಯಸ್ಸಿನ 20,839 ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಿವಿ ಸಂಬಂಧ ಸಮಸ್ಯೆಗಳನ್ನು ಕಡೆಗಣಿಸಬಾರದು ಎಂದು ಎಮ್ ಎಸ್ ಜೆ ನಾಯಕ ಸಲಹೆ ನೀಡಿದರು.
ಈ ಸಹಯೋಗದ ಪ್ರಯತ್ನವು ಮಕ್ಕಳ ಶ್ರವಣ ದೋಷವನ್ನು ಜೀವನದ ಆರಂಭದಲ್ಲಿ ಗುರುತಿಸುವ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಸರಿಪಡಿಸ ಬಹುದಾಗಿದೆ ಎಂದರು. ಮಕ್ಕಳ ಮಾತು ಮತ್ತು ಶ್ರವಣ ಬೆಳವಣಿಗೆಯ ಸಮಸ್ಯೆಗಳ ಬಗ್ಗೆ ಕಾಳಜಿವಹಿಸುವ ಪೋಷಕರು ನಾಯಕ್ಸ್ ಸ್ಪೀಚ್ ಎಂಡ್ ಹಿಯರಿಂಗ್ ಕೇಂದ್ರದಲ್ಲಿ ಉಚಿತವಾಗಿ ಕಿವಿ ತಪಾಸಣೆ ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.
ನಾಯಕ್ಸ್ ಸ್ಪೀಚ್ ಎಂಡ್ ಹಿಯರಿಂಗ್ ಕ್ಲಿನಿಕ್ನ ಉಚಿತ ಶ್ರವಣ ತಪಾಸಣೆ ಕೇಂದ್ರದ ಉದ್ಘಾಟನಾ ಸಮಾರಂಭವು ಬೆಂಗಳೂರಿನ ಜೆ.ಪಿ.ನಗರದ ರಾಘವೇಂದ್ರ ಸ್ವಾಮಿಗಳ ಮಠದ ಸಮೀಪ ಮಾರ್ಚ್ 3 ರ ಭಾನುವಾರದಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಗೌರವಾನ್ವಿತ ಶ್ರೀ ಬಿ ದಯಾನಂದ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. ಕೇಂದ್ರವು ಪ್ರತಿ ಮಂಗಳವಾರ 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಶ್ರವಣ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು 080- 42075691 ಅನ್ನು ಸಂಪರ್ಕಿಸಿ.