ಬೆಂಗಳೂರು: ಬೆಂಗಳೂರಿಗರ ಪಾರಂಪರಿಕ ಹಬ್ಬ, ಐತಿಹಾಸಿಕ ಜಾತ್ರೆ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಮುಗಿದಿದ್ದು, ಇದೇ ೧೭ರಿಂದ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ೨೦೨೫ರ ಸಿದ್ಧತೆ ಆರಂಭವಾಗಲಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸ್ಥಳೀಯ ಶಾಸಕ, ಜಿಬಿಎ ಅಧಿಕಾರಿಗಳ ನೇತೃತ್ವದಲ್ಲಿ ಪುನರ್ ಪರಿಶೀಲನೆ ಸಭೆ ನಡೆಸಿ, ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಇದರ ಜೊತೆಗೆ ಪರಿಷೆಗೆ ಬರುವ ಜನರು ಎಲ್ಲೆಂದರಲ್ಲಿ ಕಸ ಹಾಕುವಂತಿಲ್ಲ. ಈ ಬಗ್ಗೆ ಜಿಬಿಎ ಸಹ ಜಾಗೃತಿ ಮೂಡಿಸುವ ಪ್ಲಾನ್ ಮಾಡಿದೆ. ಜೊತೆಗೆ ಎಲ್ಲೆಂದರಲ್ಲಿ ಕಸ ಹಾಕಿದರೆ ಎರಡು ಸಾವಿರದವರೆಗೂ ಫೈನ್ ಹಾಕಬಹುದಾಗಿದೆ. ಮಾರ್ಷಲ್ಗಳ ನಿಯೋಜನೆಯನ್ನು ಸಹ ಮಾಡಲಾಗಿದೆ. ಇನ್ನೂ ಈ ಬಾರಿಯ ಪರಿಷೆ ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಿದ್ದು, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಸುವಂತಿಲ್ಲ. ಒಂದು ವೇಳೆ ಬಳಸಿದ್ರೇ ಎರಡು ಸಾವಿರ ರೂಪಾಯಿವರೆಗೂ ಫೈನ್ ಹಾಕುವ ಎಚ್ಚರಿಕೆಯನ್ನು ಜಿಬಿಎ ಪಶ್ಚಿಮ ಪಾಲಿಕೆ ಆಯುಕ್ತ.ಕೆ.ವಿ ರಾಜೇಂದ್ರ ನೀಡಿದ್ದಾರೆ.



