ಬೆಂಗಳೂರು: ಬೆಂಗಳೂರು ದಕ್ಷಿಣ ತಾವರೆಕೆರೆ ಸೊಂಡೇಕೊಪ್ಪ ರಸ್ತೆ,ಮೇಟಿಪಾಳ್ಯದಲ್ಲಿರುವ ಶ್ರೀ ಶತಶೃಂಗ ವಿದಾಸಂಸ್ಥೆಗಳ ಆವರಣದಲ್ಲಿ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ವತಿಯಿಂದ ಹಿರಿಯ ನಾಗರೀಕ ಆರೈಕೆ,ತರಬೇತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಹಾತ್ಮ ಜ್ಯೋತಿಬಾಪುಲೆ ಪ್ರಶಸ್ತಿ ಪುರಸ್ಕøತರಾದ ಬಳೇಪೇಟೆ ವೆಂಕಟೇಶ್ರವರು ಸರ್ಕಾರದ ವತಿಯಿಂದ ಹಿರಿಯ ನಾಗರೀಕರಿಗೆ ವೈದ್ಯರ ಸಲಹೆಯಂತೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ನೀಡುವುದು ಮತ್ತು ವ್ಯಾಯಾಮ, ಆಹಾರ ಪದ್ಧತಿ ಉಪಯೋಗಿಸುವ ಹಾಗೂ ವಾಯು ವಿಹಾರಕ್ಕೆ ತಮ್ಮದೇ ಆದ ಚಟುವಟಿಕೆಗಳಲ್ಲಿ ಹಿರಿಯ ನಾಗರಿಕರಿಗೆ ಆರೈಕೆಯ ಮೂಲಕ ಮೂರು ತಿಂಗಳ ತರಬೇತಿ (ಜೆರಿಯಾಟ್ರಿಕ್ -ವೃದ್ಧಾರೋಗ್ಯಶಾಸ್ತ್ರ) ಪಡೆದ 25 ಸದಸ್ಯರುಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸಕ ಡಾ.ಅರ್ಜುನ್, ಶತಶೃಂಗ ವಿದಾಸಂಸ್ಥೆಗಳ ಸಂಸ್ಥಾಪಕರಾದ ನಾಗವೇಣಮ್ಮರಾಂಪ್ರಸಾದ್ ಸಂಸ್ಥೆಯ ಅಧ್ಯಕ್ಷ ಆರ್.ಗುರುಚರಣ್,ಮುಖ್ಯೋಪಾಧ್ಯಾಯಿನಿ ಸುಧಾ,ರಂಗನಾಥ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.