ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಗಗನಚುಕ್ಕಿ ಜಲಪಾತವು ಹೆಚ್ಚಿನ ನೀರಿನ ಪ್ರಮಾಣ ಇಲ್ಲದೆ ಸೊರಗುತ್ತಿದೆ. ಮಳೆಯ ಅಭಾವದಿಂದ ಕೆಆರ್ಎಸ್ ಅಣೆಕಟ್ಟೆಯು ತುಂಬದೇ ಬರಿದಾದ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟಿರುವ ಪ್ರಮಾಣದಷ್ಟೇ ನೀರು ಮಾತ್ರ ಹೋಗುತ್ತಿದ್ದು, ಸದಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಗಗನಚುಕ್ಕಿ ಜಲಪಾತವೂ ಪ್ರವಾಸಿಗರ ಸಂಖ್ಯೆಯೂ ಸಹ ಇಳಿ ಮುಖವಾಗಿದೆ.
ತನ್ನ ಸುತ್ತ ದಟ್ಟ ಅರಣ್ಯದ ಹಚ್ಚ ಹಸಿರಿನಲ್ಲಿ ಬೋರ್ಗರಿದ್ದು ಹಾಲಿನ ನೊರೆಯಂತೆ ಉಕ್ಕಿ ಹರಿದು ಹಕ್ಕಿಗಳ ಕಲರವನ್ನು ಕೇಳಿ ಆನಂದಿಸುತ್ತಿದ್ದ ಪ್ರವಾಸಿಗರು.ನಿರಾಶೆಯಿಂದ ಮನೆಯಲ್ಲಿ ಇರುವಂತಾಗಿದೆ ಕಾರಣ ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ಹಾಗೂ ಕೊಡಗಿನಲ್ಲಿ ಮಳೆ ಇಲ್ಲದೆ ತಲಕಾವೇರಿಯಲ್ಲಿ ಸಹ ನೀರಿನ ಪ್ರಮಾಣ ಇಲ್ಲದ ಪರಿಣಾಮ ಕೆ.ಆರ್ .ಎಸ್.ಅಣೆಕಟ್ಟೆಯು ಬರಿದಾಗಿ ಗಗನಚುಕ್ಕಿ ಜಲಪಾತಕ್ಕೆ ನೀರಿನ ಪ್ರಮಾಣ ಇಲ್ಲದೆ ಸೊರಗುತ್ತಿದೆ ಅಲ್ಲದೇ ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ನೀರು ಇಲ್ಲದೆ ರೈತರ ಜಮೀನುಗಲ್ಲಿ ಬೆಳೆ ಮಾಡಲಾಗಿದೆ ರಾಜ್ಯದಲ್ಲಿ ಬರಗಾಲ ಆವರಿಸಿಕೊಂಡಿದೆ.
ಮಂಡ್ಯ ಹಾಗೂ ಮೈಸೂರು ಬೆಂಗಳೂರು ನಗರಗಳಿಗೆ ಕುಡಿಯುವ ನೀರನ್ನು ಸಹ ಒದಗಿಸುವ ಜೀವನಾಡಿ ಈ ಕಾವೇರಿ ಮಾತೆಯಾಗಿದ್ದಾಳೆ.ರಾಜ್ಯದಲ್ಲಿ ಮಳೆಯಾಗಲು ವರ್ಣನ ಕೃಷೆ ರಾಜ್ಯದ ಜನರ ಮೇಲೆ ಬೀಳಲು ಹಲವಾರು ಹೋಮ ಹವನಗಳನ್ನು ಮಾಡಿದರು ಸಹ ವರ್ಣನ ಮುನಿಸು ಮಾತ್ರ ಕಡಿಮೆಯಾಗಿಲ್ಲ ಮಳೆಯು ಇಲ್ಲದೆ ರಾಜ್ಯ ಬರಗಾಲದಿಂದ ತತ್ತರಿಸಿ ಹೋಗಿದೆ.
ಕೃಷಿಯನ್ನೇ ನಂಬಿ ಬದುಕುತ್ತಿದ್ದ ರೈತನ ಬದುಕು ಅಧೋ ಗತಿಯಾಗಿದೆ. ರಾಜ್ಯದಲ್ಲಿ ಹಾಗೂ ಕೊಡಗಿನಲ್ಲಿ ಉತ್ತಮ ಮಳೆಯಾದರೆ ರಾಜ್ಯದ ರೈತರ ಬದುಕು ಹಸನಾಗುತ್ತದೆ ಅಲ್ಲದೆ ಗಗನಚುಕ್ಕಿ ಚಾಮರಾಜನಗರದ ಭರಚುಕ್ಕಿ ರಾಜ್ಯದ ಇತರ ಜಲಪಾತಗಳು ಉಕ್ಕಿ ಹರಿದು ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಮಾಡಲು ವರುಣ ಕೃಪೆ ಮಾಡಬೇಕು.