ಕೆ.ಆರ್.ಪುರ: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್ಸಂಗ್ ಇಂದು ಅದ್ಭುತವಾದ ಆವಿಷ್ಕಾರಗಳನ್ನು ಹೊಂದಿರುವ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಅನ್ನು ಬಿಡುಗಡೆ ಮಾಡಿದೆ. ಹೊಸ ಎ ಸರಣಿಯ ಸಾಧನಗಳು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆ, ಎಐ ಫೀಚರ್ ಗಳುಳ್ಳ ಕ್ಯಾಮೆರಾ, ಟ್ಯಾಂಪರ್-ರೆಸಿಸ್ಟೆಂಟ್ ಸೆಕ್ಯೂರಿಟಿ, ಸ್ಯಾಮ್ಸಂಗ್ ನಾಕ್ಸ್ ವಾಲ್ಟ್ ಸೇರಿದಂತೆ ಅನೇಕ ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ಹೊಂದಿವೆ.
“ಗ್ಯಾಲಕ್ಸಿ ಎ ಸರಣಿಯು ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ಫೋನ್ ಸರಣಿಯಾಗಿದೆ. ಇದು ಭಾರತದ ಎಂಝಡ್ ಗ್ರಾಹಕರಲ್ಲಿ ಮಧ್ಯೆ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಗ್ಯಾಲಕ್ಸಿ ಎ55 5ಜಿ & ಎ35 5ಜಿ ಬಿಡುಗಡೆಯು ಹೊಸ ರೀತಿಯ ಅಪೂರ್ವ ನಾವೀನ್ಯತೆಗಳನ್ನು ಎಲ್ಲರಿಗೂ ದೊರಕಿಸುವಂತೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಸಾಧನಗಳು 5ಜಿ ಸ್ಮಾರ್ಟ್ಫೋನ್ ವಿಭಾಗದಲ್ಲಿ ಮತ್ತು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಿಡ್ ಪ್ರೀಮಿಯಂ (ರೂ.30,000-ರೂ.50,000) ವಿಭಾಗದಲ್ಲಿ ನಮ್ಮ ನಾಯಕತ್ವವನ್ನು ಗಟ್ಟಿಗೊಳಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಸ್ಯಾಮ್ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ ಸೀನಿಯರ್ ಡೈರೆಕ್ಟರ್ ಘುಫ್ರಾನ್ ಆಲಂ ಹೇಳಿದರು.
ವಿನ್ಯಾಸ ಮತ್ತು ಬಾಳಿಕೆ: ಮೊದಲ ಬಾರಿಗೆ, ಗ್ಯಾಲಕ್ಸಿ ಎ55 5ಜಿ ಲೋಹದ ಚೌಕಟ್ಟನ್ನು ಹೊಂದಿದೆ ಮತ್ತು ಗ್ಯಾಲಕ್ಸಿ ಎ35 5ಜಿ ಪ್ರೀಮಿಯಂ ಗ್ಲಾಸ್ ಅನ್ನು ಮರಳಿ ಪಡೆದಿದೆ. ಈ ಫೋನ್ಗಳು ಆಸಮ್ ಲಿಲಾಕ್, ಆಸಮ್ ಐಸ್ ಬ್ಲೂ ಮತ್ತು ಆಸಮ್ ನೇವಿ ಎಂಬ ಮೂರು ಟ್ರೆಂಡಿ ಬಣ್ಣಗಳಲ್ಲಿ ಲಭ್ಯವಿದೆ. ಇದು ಐಪಿ67 ರೇಟಿಂಗ್ ಗಳಿಸಿದ್ದು, 1 ಮೀಟರ್ ಶುದ್ಧ ನೀರಿನಲ್ಲಿ 30 ನಿಮಿಷಗಳವರೆಗೆ ಇರಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಧೂಳು ಮತ್ತು ಮರಳು ನಿರೋಧಕ ಗುಣ ಇರುವ ಫೋನ್ ಗಳಾಗಿವೆ. 6.6-ಇಂಚಿನ ಎಫ್ಎಚ್ಡಿ+ ಸೂಪರ್ ಅಮೋಲ್ಡ್ ಡಿಸ್ಪ್ಲೇ ಮತ್ತು ಕಡಿಮೆಗೊಳಿಸಿದ ಬೆಜೆಲ್ಗಳ ಜೊತೆಗೆ 120ಹರ್ಟ್ಜ್ ರಿಫ್ರೆಶ್ ದರ ಹೊಂದಿದ್ದು, ಅತ್ಯಂತ ಸೂಕ್ಷ್ಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.
ಕ್ಯಾಮೆರಾ ಆವಿಷ್ಕಾರಗಳು: ಈ ಹೊಸ ಎ ಸರಣಿಯ ಸ್ಮಾರ್ಟ್ಫೋನ್ಗಳು ಬಳಕೆದಾರರು ಅತ್ಯುನ್ನತ ಕಂಟೆಂಟ್ ಗಳನ್ನು ಸಿದ್ಧಗೊಳಿಸಲು ನವೀನ ಎಐ- ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುತ್ತವೆ. ಫೋಟೋ ರೀಮಾಸ್ಟರ್, ಇಮೇಜ್ ಕ್ಲಿಪ್ಪರ್ ಮತ್ತು ಆಬ್ಜೆಕ್ಟ್ ಎರೇಸರ್ ಎಂಬ ಈ ವೈಶಿಷ್ಟ್ಯಗಳು ಲಭ್ಯವಿದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಗಳು 50 ಎಂಪಿ ಟ್ರಿಪಲ್ ಕ್ಯಾಮೆರಾ ಹೊಂದಿದ್ದು, ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐಎಸ್ಪಿ)ಮೂಲಕ ಉನ್ನತೀಕರಿಸಲ್ಪಟ್ಟ ನೈಟೋಗ್ರಫಿ ಹೆಗ್ಗಳಿಕೆ ಪಡೆದಿದೆ.