ಬೆಂಗಳೂರು : ಮಹಾತ್ಮ ಗಾಂಧೀಜಿಯನ್ನು ಓರ್ವ ಮತಾಂಧ ಕೊಂದು ಹಾಕಿದ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಗುಂಡಿಟ್ಟು ಕೊಂದ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ಇರುವ ದೇಶದ ಸ್ವಾತಂತ್ರ÷್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ ಹುತಾತ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು
ಅಹಿಂಸಾ ಪರಮೋಧರ್ಮ ಎಂದು ಗಾಂಧೀಜಿ ತಿಳಿಸಿದ್ದರು. ಮಹಾತ್ಮ ಗಾಂಧೀಜಿ ಅವರಿಗೆ ಯಾವುದೇ ಸ್ವಾರ್ಥ ಇರಲಿಲ್ಲ. ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಟ ಮಾಡಿದರು ದೇಶ ಸ್ವತಂತ್ರ ಆಗಬೇಕು ಅಷ್ಟೇ ಅಂತ ಗಾಂಧೀಜಿ ಮನಸ್ಸಿನಲ್ಲಿ ಇತ್ತು ಸ್ವತಂತ್ರ ಸಿಗಬೇಕು ನಾವು ಗೌರವ ಸಲ್ಲಿಸಬೇಕೆಂದರೆ ಗಾಂಧೀಜಿ ಅವರ ತತ್ವ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಸ್ವಾತಂತ್ರ÷್ಯ ಹೋರಾಟಗಾರರ ತ್ಯಾಗ ಮತ್ತ ಬಲಿದಾನವನ್ನು ಸ್ಮರಿಸಬೇಕು. ಗಾಂಧೀಜಿಯವರು ಸ್ವಾತಂತ್ರ÷್ಯ ಚಳುವಳಿಯ ನೇತೃತ್ವವನ್ನು ವಹಿಸಿದ್ದರು. ಈ ದಿನವನ್ನು ದೇಶದ ಜನರು ಸ್ಮರಿಸಿಕೊಳ್ಳುತ್ತಾರೆ. ಅವರು ಸಮಾಜಕ್ಕೆ ಮಾಡಿರುವ ಸೇವೆಯನ್ನು ಸ್ಮರಿಸಿಕೊಳ್ಳಬೇಕು, ಗಾಂಧೀಜಿ ಅವರು ಎಲ್ಲಾ ತ್ಯಾಗ ಮಾಡಿದರು ಜೈಲಿಗೆ ಸಹ ಹೋಗಿದ್ದರು. ಮಹಾತ್ಮ ಗಾಂಧೀಜಿಯವರು ಇಡೀ ದೇಶವನ್ನು ಸುತ್ತಿದ್ದರು.ಕಾಂಗ್ರೆಸ್ ಪಕ್ಷ ಗಾಂಧೀಜಿ ನೇತೃತ್ವದಲ್ಲಿ ಹೋರಾಟ ಮಾಡಿತ್ತು ಎಂದು ತಿಳಿಸಿದರು.
ಇನ್ನು ರಾಜ್ಯದ ೬ ಸಾವಿರ ಗ್ರಾಮ ಪಂಚಾಯಿತಿಗಳಿಗೆ ಗಾಂಧೀಜಿ ಅವರ ಹೆಸರು ಇಡುತ್ತೇವೆ. ಗ್ರಾಮಗಳು ಸ್ವಾವಲಂಬನೆ ಆಗದಿದ್ದರೆ ದೇಶವು ಪ್ರಗತಿ ಆಗುವುದಿಲ್ಲ. ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಉದ್ಧಾರ ಆಗಬೇಕೆಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಕರ್ನಾಟಕ ರಾಜ್ಯದಲ್ಲಿ ೬,೦೦೦ ಗ್ರಾಮ ಪಂಚಾಯಿತಿಗಳು ಇವೆ. ಗ್ರಾಮ ಪಂಚಾಯಿತಿಗಳಿಗೆ ಗಾಂಧೀಜಿ ಹೆಸರು ಇಡಲು ತೀರ್ಮಾನ ಮಾಡಿದ್ದೇವೆ. ಗ್ರಾಮಸ್ವರಾಜ್ಯ ಕಲ್ಪನೆಯ ಕೊಟ್ಟಿದ್ದು ಮಹಾತ್ಮ ಗಾಂಧೀಜಿ ಅವರೇ ಎಂದರು.
ಗಾಂಧಿಯವರನ್ನು ಓರ್ವ ಮತಾಂಧ ಕೊಂದು ಹಾಕಿದ: ಸಿಎಂ



