ಗಾಂಧಿನಗರ ವಿಧಾನಸಭಾ ಕ್ಷೇತ್ರ: ಶಾಸಕರ ಜನಸಂಪರ್ಕ ಕಛೇರಿಯಲ್ಲಿ ಕೊಳಗೇರಿ ನಿರ್ಮೂಲನಾ ಮಂಡಳಿ ವತಿಯಿಂದ ನಾಗಮ್ಮನಗರದ ೩೮ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ. ಸ್ಥಳೀಯ ಶಾಸಕರು, ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ ಕೊಳಗೇರಿ ನಿವಾಸಿಗಳಿಗೆ
ಹಕ್ಕುಪತ್ರ ಸಿಕ್ಕಿರುವುದುರಿಂದ ಈ ಜಾಗ ನಿಮ್ಮ ಸ್ವತ್ತುಗುತ್ತದೆ. ಇಂದಿನಿAದ ತಾವು ಮನೆಯ ಮಾಲಿಕರು ನಿಮಗೆ ಇ-ಖಾತೆ ಮಾಡಿಸಿಕೊಡಲಾಗುವುದು.
ಹಕ್ಕುಪತ್ರ ಮಹಿಳೆಯರಿಗೆ ಹೆಸರಿನಲ್ಲಿ ಮಾಡಿಕೊಡಲಾಗಿದೆ. ನಮ್ಮ ಸರ್ಕಾರ ಮಹಿಳೆಯರಿಗೆ ಆದ್ಯತೆ ನೀಡಿ, ಮಹಿಳಾ ಪರ ಯೋಜನೆಗಳನ್ನು ರೂಪಿಸಿ ಮಹಿಳೆಯರಿಗೆ ಗೌರವಿಸಲಾಗುತ್ತಿದೆ. ನಾಗಮ್ಮನಗರದಲ್ಲಿ ಒಟ್ಟಾರೆ ೨೨೦ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ, ಉಳಿದ ೫೦ಮನೆಗಳಿಗೆ ಹಕ್ಕುಪತ್ರ ಮುಂದಿನ ದಿನ ಕೊಡಿಸಲಾಗಿದೆ.
೯೮ಮನೆಗಳನ್ನು ಕಟ್ಟಿಕೊಡಲಾಗಿದೆ. ೫ ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಶಕ್ತಿಯೋಜನೆ, ಯುವನಿಧಿ, ವಿದ್ಯುತ್ ಉಚಿತ ಮನೆಯ ಯಾಜಮಾನಿಗೆ ೨೦೦೦ಸಾವಿರ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಡವರ ಪರ ಕೆಲಸ ಮಾಡುತ್ತಿದ್ದಾರೆ.
ಕುಟುಂಬದ ಭದ್ರತೆ ಮತ್ತು ಬಡತನ ನಿರ್ಮೂಲನಾಕ್ಕೆ ನಮ್ಮ ಸರ್ಕಾರ ಹೋರಾಟ ಮಾಡುತ್ತಿದೆ ಎಂದು ಹೇಳಿದರು. ಕಾಟನ್ ಪೇಟೆ ಬ್ಲಾಕ್ ಕಾಂಗ್ರೆಸ್
ಸಮಿತಿ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ, ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸರವಣನ್ ಮತ್ತು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ
ಸಮಿತಿ ಅಧ್ಯಕ್ಷರಾದ ಉಬಾಬು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಸುಧಾಕರ್ ಅಡ್ಡಪ್ಪ ನಾಗೇಶ್, ಕಣ್ಣನ್, ಕುಮಾರ್, ರಾಜೇಶ್ ರವರು ಕಾಂಗ್ರೆಸ್
ಪಕ್ಷದ ಮುಖಂಡರುಗಳು, ಕೊಳಗೇರಿ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.