ದಾಬಸ್ ಪೇಟೆ: ಡಿಸೆಂಬರ್ ನಂತರ ಕ್ಷೇತ್ರಕ್ಕೆ ವಿಶೇಷ ಅನುದಾನ ಬಿಡುಗಡೆಯಾಗಲಿದೆ, ದಕ್ಷಿಣಕಾಶಿ ಶಿವಗಂಗೆ ರೋಪ್ ವೇ ನಿರ್ಮಾಣ
ಮಾಡುವುದು ನನ್ನ ಗುರಿ ಎಂದು ನೆಲಮಂಗಲಶಾಸಕ ಎನ್.ಶ್ರೀನಿವಾಸ್ ಹೇಳಿದರು.ಹೋಬಳಿಯ ದೇವರಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದಿಂದ, ಶುಕ್ರವಾರ ಮೊದಲನೇ ವರ್ಷದ ವಾರ್ಷಿಕೋತ್ಸವ ಹಾಗೂ ಗಣ್ಯರಿಗೆ ಸನ್ಮಾನ, ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಕರಲ್ಲಿ ಒಗ್ಗಟ್ಟು ಉಂಟಾಗಿ ಗ್ರಾಮದಲ್ಲಿ ಸಹಭಾಳ್ವೆ ಏರ್ಪಡಿಸಲು ದೇವರ ಉತ್ಸವ ಸಹಕಾರಿ, ಗ್ರಾಮದ ಯುವಕರಿಗೆ ಧನ್ಯವಾದಗಳು, ಈ ಗ್ರಾಮದ ಸಮಗ್ರ ಅಭಿವೃದ್ಧಿ ನನ್ನ ಗುರಿ, ನಮ್ಮ ಸರಕಾರದಿಂದ ಗ್ಯಾರಂಟಿ ಯೋಜನೆಗಳು ಮೊದಲ ಆದ್ಯತೆ, ಡಿಸೆಂಬರ್ ನಂತರ ವಿಶೇಷ ಅನುದಾನ ನಮ್ಮ ಸರಕಾರ ಬಿಡುಗಡೆ ಮಾಡುತ್ತದೆ,
100 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ, ಲೋಕಪಯೋಗಿ ಇಲಾಖೆಗೆ 20 ಕೋಟಿ ಅನುದಾನ ನೀಡಿದ್ದಾರೆ, ಆದ್ಯತೆ ಮೇರೆಗೆ ಕೆಲಸ ಮಾಡುತ್ತೇನೆ, ಪ್ರವಾಸೋದ್ಯಮ ಸ್ಥಳವಾದ ಶಿವಗಂಗೆ, ನಿಜಗಲ್, ಮಹಿಮೇರಂಗ ಬೆಟ್ಟ, ಮಣ್ಣೆ ಗೆ ಪ್ರಾಶಸ್ತ್ಯ ನೀಡುವುದೇ ನನ್ನ ಗುರಿ, ಮುಂದಿನ ವರ್ಷ ಜನವರಿಯಲ್ಲಿ, ವೃಷುಭಾವತಿ ಯೋಜನೆ ಮುಖಾಂತರ 50 ಕೆರೆಗೆ ನೀರು ತುಂಬಿಸುವ ಯೋಜನೆಗೆ ಭೂಮಿ ಪೂಜೆಗೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ, ಸಚಿವರು ನೆಲಮಂಗಲದಲ್ಲೇ ಭೂಮಿಪೂಜೆ ಮಾಡಿ ಚಾಲನೆ ಮಾಡಿಸುವ ಗುರಿ ಇದೆ ಎಂದರು.
ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ ವಿಕದೊಂದಿಗೆ ಮಾತನಾಡಿ, ಸಂಮಿಧಾನದ ಆಶಾಯಗಳನ್ನು ಪೂರೈಸಲು ಸರಕಾರದ ಜೊತೆಗೆ ಯುವಕರು ಮುಂದಾಗಬೇಕು, ಹೋಬಳಿ ಅಂಬೇಡ್ಕರ್ ಸೇನೆ ಬಲಿಷ್ಟವಾಗಿದೆ, ಜಿಲ್ಲಾಧ್ಯಕ್ಷ ಶಿವಸ್ವಾಮಿ ಸಂಘಟನೆಗೆ ಹಲವಾರು ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಬೆಂ.ಗ್ರಾ. ಜಿಲ್ಲಾಧ್ಯಕ್ಷ ಶಿವಸ್ವಾಮಿ, ಗ್ರಾ.ಪಂ.ಸದಸ್ಯರಾದ ವೆಂಕಟಾಚಲಯ್ಯ, ಡಿ.ಜೆ.ಸತೀಶ್, ವಿ.ಎಸ್.ಎಸ್.ಎನ್.ಅಧ್ಯಕ್ಷ ಯೋಗನಂದೀಶ್, ನಿವೃತ್ತ ಇಂಜನಿಯರ್ ಗೋವಿಂದರಾಜು, ಜಕ್ಕನಹಳ್ಳಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಅಗಳಕುಪ್ಪೆ ಗೋವಿಂದರಾಜು, ಅಂಬೇಡ್ಕರ್ ಸೇನೆಯ ತಾಲೂಕು ಅಧ್ಯಕ್ಷ ಮನು.ಬಿ.ಎನ್, ಸೋಂಪುರ ಹೋಬಳಿ ಗೌರವಾಧ್ಯಕ್ಷ ಲಕ್ಷ್ಮೀ ಕಾಂತ್, ಅಧ್ಯಕ್ಷ ವಸಂತ್ ಕುಮಾರ್, ವಕೀಲ ಯುವರಾಜ್, ನಾಗೇಶ್, ಕಾಂಗ್ರೆಸ್ ಮುಖಂಡರಾದ ಶಿವಕುಮಾರ್, ಹೊಸನಿಜಗಲ್ ಸಿದ್ದರಾಜು, ಶಿವಗಂಗೆ ಹನುಮಂತರಾಜು, ಅರ್ಜುನ್, ದೇವರಾಜು, ಬರಗೇನಹಳ್ಳಿ ನಾರಾಯಣಸ್ವಾಮಿ, ಪಾರ್ಥಣ್ಣ, ಇನ್ನೀತರರಿದ್ದರು.