ಕುಣಿಗಲ್: ಗ್ಯಾಸ್ ಸಿಲಿಂಡರ್ ಸ್ಟೌ ವ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಸ್ಪೋಟದಲ್ಲಿ ಕುಣಿಗಲ್ ಪಟ್ಟಣ ಕೋಟೆ ಪ್ರದೇಶದ ಸಂತೇಮೈದಾನ ವಾಸಿ ಕುಶಾಲ್ (11), ಶಿವಣ್ಣ( 45 ) ಮೃತ ದುರ್ದೈವಿಗಳು.
ಘಟನೆ ವಿವರ : ರವಿಕುಮಾರ್ ಕಾರಪುರಿ ವ್ಯಾಪಾರಿಯಾಗಿದ್ದು, ಪುರಿಯನ್ನು ಉರಿಯಲು ಹಾಗೂ ಅಡಿಗೆ ಮಾಡಲು ನಾಲ್ಕು ಕೆ.ಜಿ ಗ್ಯಾಸ್ ಸಿಲಿಂಡರ್ ಸ್ಟೌವ್ ಬಳಸುತ್ತಿದ್ದರು, ರವಿಕುಮಾರ್ ಹೆಂಡತಿ ಶೃತಿ ಆಕೆಯ ಮಗಳು ಹೇಮಲತಾಳನ್ನು ಟ್ಯೋಷನ್ಗೆ ಬಿಡಲು ಶುಕ್ರವಾರ ಮೇ (17) ಮನೆಯಿಂದ ಹೊರ ಬರುತ್ತಿದಂತೆ ಮನೆಯಲ್ಲಿ ಸ್ಪೋಟದ ಶಬ್ದ ಕೇಳಿ ಬಂದಿದೆ, ಮನೆ ಒಳಗೆ ಹೋಗಿ ನೋಡಲಾಗಿ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತು, ಆ ವೇಳೆ ಮನೆಯಲ್ಲಿ ಇದ್ದ ಕುಶಾಲ್ ಹಾಗೂ ಶೃತಿ, ಹೇಮಲತಾಗೆ ಗಾಯವಾಗಿದೆ,
ನೋಡಲು ಬಂದವರಿಗೂ ಗಾಯ : ಸಿಲಿಂಡರ್ ಸ್ಪೋಟದ ಶಬ್ದವನ್ನು ಕೇಳಿದ ಅಕ್ಕ ಪಕ್ಕದ ಮನಯವರಾದ ಶಿವಣ್ಣ, ಮಂಜಮ್ಮ, ಹಾಗೂ ಸಮೀನಾ ಅವರಿಗೂ ತೀವ್ರವಾಗಿ ಗಾಯಗೊಂಡಿದ್ದರು , ಈ ವೇಳೆ ಎರಡು ಮನೆಗೆ ಹಾನಿ ಉಂಟಾಗಿತ್ತು.ತೀವ್ರವಾಗಿ ಗಾಯಗೊಂಡ ಕುಶಾಲ್, ಶಿವಣ್ಣ, ಮಂಜಮ್ಮ, ಹೇಮಲತಾ, ಸಮೀನ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಶಿವಣ್ಣ, ಕುಶಾಲ್ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.