ರಾಮನಗರ: ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊAಡ ಘಟನೆಯಲ್ಲಿ ಸುಟ್ಟ ಗಾಯಗಳಾಗಿದ್ದ ಏಳು ಮಂದಿ ಪೈಕಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬಿಡದಿ ಬಳಿಯ ಕಾಡುಮನೆ ಕ್ರಾಸ್ ಬಳಿಯ ಎಲಿಗೆನ್ಸ್ ಲೇಔಟ್ ನ ಶೆಡ್ ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮುರ್ಸಿದಾಬಾದ್ ಜಿಲ್ಲೆಯ ಆದಿರಪುರ ಗ್ರಾಮದ ಜಾಹಿದ್ ಅಲಿ (೩೨), ಮನರುಲ್ ಶೇಖ್ (೪೦), ಜಿಯಾಬುರ್ ಶೇಖ್ (೪೦) ಹಾಗೂ
ತಜಬುಲ್ ಶೇಖ್ (೨೬) ಮೃತರು. ಉಳಿದ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಕಾರ್ಮಿಕರಾದ ಮನರುಲ್ ಶೇಖ್, ತಜಬುಲ್ ಶೇಖ್,
ಜಾಹಿದ್ ಅಲಿ, ಹಸನ್ ಮಲಿಕ್, ಜಿಯಾಬುರ್ ಶೇಖ್, ಶಫಿಜುಲ್ ಶೇಖ್, ನೂರ್ ಜಮಾಲ್ ಅವರೆಲ್ಲರು ಒಟ್ಟಿಗೆ ಶೆಡ್ಡಿನಲ್ಲಿ ಇರುತ್ತಿದ್ದರು. ಅ.೬ರಂದು ಶೆಡ್ ನಲ್ಲಿ ಎಲ್ ಪಿಜಿ ಸಿಲಿಂಡರ್ ಖಾಲಿಯಾಗಿದ್ದು, ಜಿಯಾಬುರ್ ಶೇಖ್ ಪರಿಚಿತರಾದ ಶಿವಣ್ಣ ಅವರಿಂದ ಸಿಲಿAಡರ್ ತಂದು ಫಿಕ್ಸ್ ಮಾಡಿದ್ದಾರೆ.
ಅ.೭ರಂದು ಬೆಳಗಿನ ಜಾವ ೨ ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊAಡು ೭ ಮಂದಿ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿತ್ತು. ಕೂಡಲೇ
ಅವರೆಲ್ಲರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬAಧ
ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.