ಮಧುಗಿರಿ: ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಬಡವನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ ಡಿ ಓ ) ಎಂ.ಗೌಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೌಡಪ್ಪ, ಗೌರವಾಧ್ಯಕ್ಷರಾಗಿ ಜಿ. ಆರ್ ಶಿವಾನಂದಯ್ಯ, ಉಪಾಧ್ಯಕ್ಷರಾಗಿ ಹೆಚ್. ಗೋಪಾಲಕೃಷ್ಣ ಸೇರಿದಂತೆ ವಿವಿಧ ಸ್ಥಾನಗಳಿಗೆ ಶಿಲ್ಪ, ರಜನಿ ರಂಗನಾಥ್, ಜುಂಜೇಗೌಡ ರವಿಚಂದ್ರರವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಲಕ್ಷ್ಮಣ್ ಮಾತನಾಡಿ -ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಜನಪರ ಕೆಲಸ ಮಾಡಿ, ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಿರಿ ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ ಎಲ್ಲ ಸದಸ್ಯರು ಆಕಸ್ಮಿಕ ಖರ್ಚು ವೆಚ್ಚಗಳಿಗಾಗಿ ನಿಧಿಯನ್ನು ಸ್ಥಾಪಿಸಿ, ಆ ನಿಧಿಯನ್ನು ಬೆಳೆಸಿಕೊಂಡು ಹೋಗಿ ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಗೌಡಪ್ಪ ಮಾತನಾಡಿ ಸಂಘದ ಸರ್ವ ಸದಸ್ಯರ ಸಹಕಾರದೊಂದಿಗೆ ಉತ್ತಮ ಸೇವೆ ನೀಡುತ್ತೇನೆ ಎಂದು ತಿಳಿಸಿದ ಅವರು ನಮ್ಮ ಸಂಘವು ಸದೃಢವಾಗಿ ಬೆಳೆಸಿ, ಸದಸ್ಯರ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆಂದರು.ಜಿಲ್ಲಾ ಸಂಘದ ಖಜಾಂಚಿ ಆರ್ ನಾಗರಾಜು. ಉಪಾಧ್ಯಕ್ಷ ನವೀನ್, ಪಿಡಿಒಗಳಾದ ಧನಂಜಯ, ಕುಮಾರಸ್ವಾಮಿ, ಹೊನ್ನೇಶ್, ಅಲ್ಮಾಸ್, ಶಿವಕುಮಾರ್, ಕಾಂತರಾಜು ಸೌಮ್ಯ ಉಪಸ್ಥಿತರಿದ್ದರು.
Leave a Review