ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಲಿಂಡರ್ ಕೊರತೆ ಹಿನ್ನೆಲೆ ಬಯೋಗ್ಯಾಸ್ ಉತ್ಪಾದನೆಗೆ ಜಿಬಿಎ ಮುಂದಾಗಿದೆ.
ಬಯೋಗ್ಯಾಸ್ ಉತ್ಪಾದನೆಯಿಂದ ಹೋಟೆಲ್ ಸೇರಿದಂತೆ ವಾಣಿಜ್ಯ ಉಪಯೋಗಕ್ಕೆ ಗ್ಯಾಸ್ ನೀಡಬಹುದು. ಸದ್ಯ ಕೋರಮಂಗಲದ ಬಯೋಗ್ಯಾಸ್ ಸೆಂಟರ್ನಿAದ ಹೋಟೆಲ್ಗಳಿಗೆ ಗ್ಯಾಸ್ ನೀಡಲಾಗುತ್ತಿದೆ. ಹೀಗಾಗಿ ಕೋರಮಂಗಲದ ಬಯೋಗ್ಯಾಸ್ ಸೆಂಟರ್ಗೆ ಜಿಬಿಎ ಮುಖ್ಯ ಆಯುಕ್ತರು ಭೇಟಿ ನೀಡಿ ಅಧಿಕಾರಿಗಳ ಜೊತೆ ಬಯೋಗ್ಯಾಸ್ ಸೆಂಟರ್ ಹಾಗೂ ಹೋಟೆಲ್ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಇದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಲಯಗಳಲ್ಲಿ ಬಯೋಗ್ಯಾಸ್ ಸೆಂಟರ್ ಮಾಡುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ.
ನಗರದಲ್ಲಿ ಸಿಲಿಂಡರ್ ಅಭಾವ ಬಯೋಗ್ಯಾಸ್ ಉತ್ಪಾದನೆಗೆ ಜಿಬಿಎ ನಿರ್ಧಾರ



